×
Ad

ದೂರುಗಳ ನಿರ್ವಹಣೆಗೆ ಶೀಘ್ರದಲ್ಲೇ ಅಹವಾಲು ಅಧಿಕಾರಿ ನೇಮಕ: ದಿಲ್ಲಿ ಹೈಕೋರ್ಟ್ ಗೆ ಟ್ವಿಟ್ಟರ್ ವಿವರಣೆ

Update: 2021-07-03 20:14 IST

ಹೊಸದಿಲ್ಲಿ,ಜು.3: ತನ್ನಲ್ಲಿ ಪ್ರಸಾರವಾಗುವ ಆಕ್ಷೇಪಕಾರಿ ವಿಷಯಗಳ ಮೇಲೆ ನಿಗಾವಿರಿಸಲು ಶೀಘ್ರದಲ್ಲಿಯೇ ಭಾರತ ದಲ್ಲಿ ಮಧ್ಯಂತರ ಸ್ಥಾನಿಕ ಅಹವಾಲು ಅಧಿಕಾರಿಯನ್ನು ನೇವಿಸುವುದಾಗಿ ಎಂದು ಖ್ಯಾತ ಮೈಕ್ರೋ ಬ್ಲಾಗಿಂಗ್ ಜಾಲ ತಾಣ ಟ್ವಿಟ್ಟರ್ ಇಂಡಿಯಾ ಶನಿವಾರ ತಿಳಿಸಿದೆ. ಅಲ್ಲಿಯವರೆಗೆ ಇಂತಹ ದೂರುಗಳನ್ನು ಇತರ ಸಿಬ್ಬಂದಿಗಳು ನಿರ್ವಹಿಸಲಿರುವರು ಎಂದು ಅದು ಹೇಳಿದೆ.

ಕೆಲವು ಆಕ್ಷೇಪಕಾರಿ ಟ್ವೀಟ್ಗಳ ವಿರುದ್ಧ ತಾನು ನೀಡಿದ್ದ ದೂರುಗಳಿಗೆ ಸಂಬಂಧಿಸಿ ಟ್ವಿಟ್ಟರ್ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿ ಬಳಕೆದಾರರೊಬ್ಬರು ದಿಲ್ಲಿ ಹೈಕೋರ್ಟ್ ನಲ್ಲಿ ಹೂಡಿದ್ದ ಪ್ರಕರಣದ ವಿಚಾರಣೆಯಲ್ಲಿ ಟ್ವಿಟ್ಟರ್ ಹೀಗೆ ಉತ್ತರಿಸಿದೆ.
  
‘‘ನೂತನ ಐಟಿ ಕಾನೂನುಗಳಿಗೆ ಅನುಗುಣವಾಗಿ ಮಧ್ಯಂತರ ಅಹವಾಲು ಅಧಿಕಾರಿಯನ್ನು ನೇಮಿಸಲಾಗಿತ್ತು. ಆದರೆ, ಈ ಏರ್ಪಾಡು ಅಂತಿಮ ಹಂತದಲ್ಲಿರುವಾಗಲೇ ಅವರು ಜೂನ್ 21ರಂದು ತನ್ನ ಅಭ್ಯರ್ಥ ವನ್ನು ಹಿಂತೆಗೆದುಕೊಂಡರು ಎಂದು ಟ್ವಿಟ್ಟರ್ನ ಹಿರಿಯ ನ್ಯಾಯವಾದಿ ಹಾಗೂ ಟ್ವಿಟ್ಟರ್ ಸಂಸ್ಥೆಯ ಕಾನೂನು ವ್ಯವಹಾರಗಳ ನಿರ್ದೇಶಕ ಮಿಕಾಹ್ ಎಲ್.ರುಬ್ಬೊ ನ್ಯಾಯಾಲಯಕ್ಕೆ ತಿಳಿಸಿದರು.
   
ತಾನು ದೂರುಗಳ ನಿರ್ವಹಣೆಗಾಗಿ ನೇಮಕಗೊಳಿಸ ಲಿರುವ ಹಂಗಾಮಿ ಅಹವಾಲು ಅಧಿಕಾರಿಯ ವಿವರಗಳನ್ನು ಈಗಾಗಲೇ ಸಲ್ಲಿಸಿರುವುದರಿಂದ ಅರ್ಜಿದಾರರು ಹೂಡಿರುವ ದಾವೆಗೆ ಯಾವುದೇ ಮಾನ್ಯತೆಯನ್ನು ನೀಡಬಾರದು ಎಂದು ಟ್ವಿಟ್ಟರ್ ಕೋರಿದೆ. ಅಲ್ಲದೆ ಟ್ವಿಟ್ಟರ್ ಅಮೆರಿಕದಲ್ಲಿ ನೋಂದಣಿಯಾದ ಕಾರ್ಪೊರೇಟ್ ಸಂಸ್ಥೆಯಾಗಿರುವುದರಿಂದ ಈ ಅರ್ಜಿಯು ವಿಚಾರಣಾ ಯೋಗ್ಯವಲ್ಲವೆಂದು ಟ್ವಿಟ್ಟರ್ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News