ಮುಂಗಾರು ಅಧಿವೇಶನದುದ್ದಕ್ಕೂ ಸಂಸತ್ತಿನ ಹೊರಗೆ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘದಿಂದ ಪ್ರತಿಭಟನೆ
ಹೊಸದಿಲ್ಲಿ: ಮುಂಗಾರು ಅಧಿವೇಶನದಲ್ಲಿ ಪ್ರತಿದಿನ ರೈತ ಸಮೂಹ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರವಿವಾರ ಪ್ರಕಟಿಸಿದೆ.
ಜನ ಪ್ರತಿನಿಧಿಗಳು ಸದನದೊಳಗೆ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುವಂತೆ ಒತ್ತಾಯಿಸಿ ಸಂಸತ್ತಿನ ಎಲ್ಲ ವಿರೋಧ ಪಕ್ಷಗಳಿಗೆ (ಸಂಸದರು) ಎಚ್ಚರಿಕೆ ಪತ್ರ ನೀಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘಟನೆ ನಾಯಕರು ತಿಳಿಸಿದ್ದಾರೆ.
"ನಾವು ಜುಲೈ 17 ರಂದು ಪ್ರತಿಪಕ್ಷದ ಸಂಸದರನ್ನು ಸದನದೊಳಗೆ ಪ್ರತಿದಿನವೂ ಈ ವಿಷಯವನ್ನು ಎತ್ತುವಂತೆ ಕೇಳುತ್ತೇವೆ. ಆದರೆ ನಾವು ಹೊರಗೆ ಕುಳಿತು ಪ್ರತಿಭಟನೆ ನಡೆಸುತ್ತೇವೆ. ಅಧಿವೇಶನದಿಂದ ಹೊರನಡೆಯುವ ಮೂಲಕ ಕೇಂದ್ರಕ್ಕೆ ಪ್ರಯೋಜನವಾಗದಂತೆ ನಾವು ಅವರಿಗೆ ಹೇಳುತ್ತೇವೆ. ಸರಕಾರವು ಈ ಸಮಸ್ಯೆಯನ್ನು ಪರಿಹರಿಸುವವರೆಗೆ ಅಧಿವೇಶನವನ್ನು ನಡೆಸಲು ಬಿಡಬೇಡಿ "ಎಂದು ರೈತ ಮುಖಂಡ ಗುರ್ನಮ್ ಸಿಂಗ್ ಚಾರುನಿ ಹೇಳಿದರು.
40 ಕ್ಕೂ ಹೆಚ್ಚು ರೈತ ಸಂಘಗಳಿಂದ ತಲಾ ಐದು ಜನರು ಸಂಸತ್ತಿನ ಹೊರಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರೈತ ಮುಖಂಡ ಗುರ್ನಮ್ ಸಿಂಗ್ ಚಾರುನಿ ಹೇಳಿದರು.
ಹೆಚ್ಚುತ್ತಿರುವ ಇಂಧನ ಬೆಲೆಗಳ ವಿರುದ್ಧ ಜುಲೈ 8 ರಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆಗೆ ಕರೆ ನೀಡಿದೆ