ಚಿಕಾಗೊ: ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಗುಂಡಿನ ದಾಳಿ

Update: 2021-07-06 15:56 GMT
photo: twitter/@CincyPD

ಚಿಕಾಗೊ, ಜು.6: ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ(ಯುಎಸ್ಎ)ದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಸಂದರ್ಭ ರವಿವಾರ ಚಿಕಾಗೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 14 ಮಂದಿ ಸಾವನ್ನಪ್ಪಿದ್ದುತ ಕನಿಷ್ಟ 74 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಗಾಯಗೊಂಡವರಲ್ಲಿ 5 

ಮಕ್ಕಳೂ ಸೇರಿದ್ದ ಕರೆ. ಘಟನೆ ನಡೆದ ಮರುದಿನ(ಸೋಮವಾರ) ಬೆಳಿಗ್ಗೆ ಚಿಕಾಗೋದ ವೆಸ್ಟ್ಸೈಡ್ ಪ್ರದೇಶದಲ್ಲಿ ಗುಂಪು ಸೇರಿದ್ದ ಜನರ ತತ್ನ್ನು ಚದುರಿಸಲು ಪ್ರಯತ್ನಿಸಿದ ಪೊಲೀಸರ ಮೇಲೆ ಗುಂಪಿನಲ್ಲಿದ್ದವರು ಗುಂಡು ಹಾರಿಸಿದ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಬೇರೆಯವರನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಮಕ್ಕಳ ಸಹಿತ ಹಲವು ಅಮಾಯಕರು ಅಪಾಯಕ್ಕೆ ಸಿಲುಕುವಂತಾಗಿದೆ ಎಂದು ಪೊಲೀಸ್ ಅಧೀಕ್ಷಕ ಡೇವಿಡ್ ಬ್ರೌನ್ ಹೇಳಿದ್ದಾರೆ. 

ಹಾರಿಸಿದ ಜಾಗಚಿಕಾಗೊದಲ್ಲಿ ವಾರಾಂತ್ಯದ ಸಂಭ್ರಮಾಚರಣೆ ಹಿಂಸಾಚಾರದಲ್ಲಿ ಕೊನೆಯಾಗುವುದು ಸಾಮಾನ್ಯ ವಿಷಯವಾಗಿದೆ. ದೇಶಾದ್ಯಂತ ಜುಲೈ 4ರ ವಾರಾಂತ್ಯದ ಹಿಂಸಾಚಾರದಲ್ಲಿ 400ಕ್ಕೂ ಹೆಚ್ಚು ಗುಂಡು ಹಾರಾಟದ ಪ್ರಕರಣ ನಡೆದಿದ್ದು ಕನಿಷ್ಟ 150 ಮಂದಿ ಸಾವನ್ನಪ್ಪಿರುವುದಾಗಿ ಮೂಲಗಳು ಹೇಳಿವೆ. ಅಮೆರಿಕದ 3ನೇ ಅತೀ ದೊಡ್ಡ ನಗರವಾಗಿರುವ ಚಿಕಾಗೊದಲ್ಲಿ 2020ರಲ್ಲಿ 774 ಕೊಲೆ ಪ್ರಕರಣ ದಾಖಲಾಗಿದ್ದು ಇದು ನ್ಯೂಯಾರ್ಕ್ ಮತ್ತು ಲಾಸ್ಏಂಜಲ್ಸ್ ನಗರಗಳೆರಡರ ಒಟ್ಟು ಪ್ರಕರಣಕ್ಕಿಂತ ಅಧಿಕವಾಗಿದೆ. ಕಳೆದ ವರ್ಷ ಜುಲೈ 4ರ ಸಂದರ್ಭ ನಡೆದಿದ್ದ ಹಿಂಸಾಚಾರದಲ್ಲಿ ಚಿಕಾಗೊದಲ್ಲಿ 17 ಮಂದಿ ಮೃತರಾಗಿದ್ದರು. ಈ ಹಿನ್ನೆಲೆಯಲ್ಲಿ , ಹಿಂಸಾಚಾರ ತಡೆಯಲು ರೂಪಿಸಲಾಗಿರುವ ಯೋಜನೆಗಳ ಬಗ್ಗೆ ಚಿಕಾಗೊ ನಗರಪಾಲಿಕೆ ಜುಲೈ 2ರಂದು ಪೊಲೀಸ್ ಅಧೀಕ್ಷಕ ಡೇವಿಡ್ ಬ್ರೌನ್ ರಿಂದ ವಿವರಣೆ ಕೇಳಿತ್ತು. ಚಿಕಾಗೊದಲ್ಲಿ ನಡೆಯುತ್ತಿರುವ ಗುಂಡಿನ ದಾಳಿ, ಹಿಂಸಾಚಾರದಿಂದ ರೋಸಿ ಹೋಗಿರುವ ಹಿರಿಯ ಮಹಿಳೆಯರು ಆಸ್ಟಿನ್ ಎಂಬಲ್ಲಿ ಟೆಂಟ್ ಹಾಕಿಕೊಂಡು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. 

ಶನಿವಾರ ಬಿಸಿಲಿನಲ್ಲಿ ಅರ್ಧವೃತ್ತಾಕಾರದಲ್ಲಿ ಕುರ್ಚಿ ಹಾಕಿಕೊಂಡು ಪ್ರತಿಭಟನೆ ನಡೆಸಿದ ಹಿರಿಯ ಮಹಿಳೆಯರು, ಸ್ಥಳೀಯ ಸಮುದಾಯದವರೇ ಸೂಕ್ತ ಕ್ರಮ ಕೈಗೊಂಡರೆ ಮಾತ್ರ ಇಲ್ಲಿ ಹಿಂಸಾಚಾರಕ್ಕೆ ಕಡಿವಾಣ ಬೀಳಬಹುದು ಎಂದು ಆಗ್ರಹಿಸಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News