ರಶ್ಯದಲ್ಲಿ ವಿಮಾನ ಪತನ: ಎಲ್ಲ 28 ಮಂದಿ ಸಾವು

Update: 2021-07-07 15:58 GMT

ಮಾಸ್ಕೋ, ಜು.7: 28 ಮಂದಿಯನ್ನು ಒಯ್ಯುತ್ತಿದ್ದ ವಿಮಾನವೊಂದು ಮಂಗಳವಾರ ರಶ್ಯದ ಪೂರ್ವ ಭಾಗದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಯಾರೂ ಬದುಕುಳಿದಿಲ್ಲ ಎಂದು ರಶ್ಯದ ಸುದ್ದಿ ಸಂಸ್ಥೆಗಳು ರಕ್ಷಣಾ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.

ಅವಳಿ ಇಂಜಿನ್ನ ‘ಆಂಟೊನೊವ್ ಎಎನ್-26’ ವಿಮಾನವು ಪೆಟ್ರೊಪವ್ಲೊವ್ಸ್ಕ್-ಕಮ್ಚಾಸ್ಕಿ ಎಂಬ ನಗರದಿಂದ ಕಮ್ಕಾಚ ಪರ್ಯಾಯ ದ್ವೀಪದ ಉತ್ತರದಲ್ಲಿರುವ ಪಾಲನ ಎಂಬ ಗ್ರಾಮಕ್ಕೆ ಹಾರುತ್ತಿದ್ದಾಗ ಸಂಚಾರ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಕಳೆದುಕೊಂಡಿತು ಎಂದು ತುರ್ತುಪರಿಸ್ಥಿತಿ ಸಚಿವಾಲಯ ತಿಳಿಸಿದೆ.

ವಿಮಾನವು ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಭೂಸ್ಪರ್ಶಕ್ಕೆ ತಯಾರಾಗುತ್ತಿದ್ದಾಗ ಪರ್ವತವೊಂದಕ್ಕೆ ಢಿಕ್ಕಿ ಹೊಡೆದಿರಬೇಕೆಂದು ಭಾವಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಟರ್ಫ್ಯಾಕ್ಸ್ ವರದಿ ಮಾಡಿದೆ.

ಅಪಘಾತದ ಬಳಿಕ ತುರ್ತು ಪರಿಸ್ಥಿತಿ ಸಚಿವಾಲಯವು ವಿಮಾನದ ಶೋಧಕ್ಕಾಗಿ ಹೆಲಿಕಾಪ್ಟರೊಂದನ್ನು ಕಳುಹಿಸಿತು ಹಾಗೂ ನೆಲದಲ್ಲಿ ಶೋಧ ನಡೆಸಲು ತಂಡಗಳನ್ನು ನಿಯೋಜಿಸಿತು. ವಿಮಾನದಲ್ಲಿ 22 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News