×
Ad

23,123 ಕೋ.ರೂ. ಮೌಲ್ಯದ ಹೊಸ ಕೋವಿಡ್ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರಕಾರ

Update: 2021-07-08 20:07 IST
ಮನ್ಸುಖ್ ಮಾಂಡವೀಯ, photo: twitter

ಹೊಸದಿಲ್ಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ನಿವಾರಿಸಲು 23,123 ಕೋಟಿ ರೂ. ಮೌಲ್ಯದ ಹೊಸ ತುರ್ತು ಪ್ರತಿಕ್ರಿಯೆ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿದೆ. ಗುರುವಾರ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಪುನರ್ ರಚಿತ  ಕೇಂದ್ರ ಸಚಿವ ಸಂಪುಟದ ಮೊದಲ ಸಭೆಯ ನಂತರ ಈ ಘೋಷಣೆ ಮಾಡಲಾಗಿದೆ.

“ದೇಶಾದ್ಯಂತ ಸುಮಾರು 736 ಜಿಲ್ಲೆಗಳಲ್ಲಿ ಮಕ್ಕಳ ಆರೈಕೆ ಕೇಂದ್ರಗಳ ನಿರ್ಮಾಣ, 20,000 ಹೊಸ ಐಸಿಯು ಹಾಸಿಗೆಗಳು ಹಾಗೂ ಔಷಧಿಗಳ  ಬಫರ್ ಸ್ಟಾಕ್ ಪಡೆಯಲು ಈ ಪ್ಯಾಕೇಜ್ ಸಹಾಯ ಮಾಡುತ್ತದೆ'' ಎಂದು ನೂತನ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ  ಪತ್ರಿಕಾಗೋಷ್ಠಿಯಲ್ಲಿ ಪ್ಯಾಕೇಜ್ ಕುರಿತಾಗಿ ವಿವರ ನೀಡಿದರು.

23,000 ಕೋಟಿ ರೂ. ಗಳಲ್ಲಿ ಸುಮಾರು  15,000 ಕೋಟಿ ರೂ. ಗಳನ್ನು ಕೇಂದ್ರದಿಂದ ಖರ್ಚು ಮಾಡಲಾಗುವುದು ಮತ್ತು 8,000 ಕೋಟಿ ರೂ. ಗಳನ್ನು ರಾಜ್ಯಗಳಿಗೆ ವಿನಿಯೋಗಿಸಲಾಗುವುದು ಎಂದು ಅವರು ಹೇಳಿದರು. ಮುಂದಿನ ಒಂಬತ್ತು ತಿಂಗಳಲ್ಲಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News