ವಿಂಬಲ್ಡನ್:ಭಾರತ ಸಂಜಾತ ಸಮೀರ್ ಬ್ಯಾನರ್ಜಿಗೆ ಬಾಲಕರ ಸಿಂಗಲ್ಸ್ ಪ್ರಶಸ್ತಿ

Update: 2021-07-11 14:49 GMT
photo: facebook 

ಲಂಡನ್, ಜು.11: ಭಾರತ ಸಂಜಾತ, ಅಮೆರಿಕದ ಟೆನಿಸ್ ಆಟಗಾರ ಸಮೀರ್ ಬ್ಯಾನರ್ಜಿ ಸಹ ಆಟಗಾರ ವಿಕ್ಟರ್ ಲಿಲೋವ್ ರನ್ನು ನೇರ ಸೆಟ್ ಗಳಿಂದ ಮಣಿಸುವುದರೊಂದಿಗೆ ವಿಂಬಲ್ಡನ್ ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಎರಡನೇ ಬಾರಿ ಜೂನಿಯರ್ ಗ್ರ್ಯಾನ್ ಸ್ಲಾಮ್ ನಲ್ಲಿ ಆಡುತ್ತಿರುವ 17ರ ಹರೆಯದ ಬ್ಯಾನರ್ಜಿ ರವಿವಾರ 1 ಗಂಟೆ, 22 ನಿಮಿಷಗಳ ಕಾಲ ನಡೆದ ಫೈನಲ್ ನಲ್ಲಿ 7-5, 6-3 ಸೆಟ್ ಗಳ ಅಂತರದಿಂದ ಜಯ ಸಾಧಿಸಿದರು. ಬ್ಯಾನರ್ಜಿ ಹೆತ್ತವರು 1980ರಲ್ಲಿ ಅಮೆರಿಕಕ್ಕೆ ತೆರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News