ಪಶ್ಚಿಮ ಅಮೆರಿಕದಲ್ಲಿ ಉಷ್ಣಮಾರುತದ ಆರ್ಭಟ: 3 ಕೋಟಿಗೂ ಅಧಿಕ ಜನತೆ ಸೆಕೆಗೆ ತತ್ತರ

Update: 2021-07-11 19:02 GMT

ಸ್ಯಾನ್ಫ್ರಾನ್ಸಿಸ್ಕೊ, ಜು.11: ಪಶ್ಚಿಮ ಅಮೆರಿಕದಾದ್ಯಂತ ಬೀಸುತ್ತಿರುವ ಉಷ್ಣಮಾರು ತದಿಂದ ಆ ಪ್ರದೇಶದ 3 ಕೋಟಿಗೂ ಅಧಿಕ ನಿವಾಸಿಗಳಉ ಬಾಧಿತರಾಗಿದ್ದಾರೆ. ಈ ಪ್ರಾಂತದಲ್ಲಿ ತಾಪಮಾನದಲ್ಲಿ ದಾಖಲೆಯ ಏರಿಕೆಯಾಗಿರುವುದು ಎರಡನೆ ಸಲವಾಗಿದೆ.

ಪಶ್ಚಿಮ ಅಮೆರಿಕ ಪ್ರಾಂತದ ಪ್ರಮುಖ ನಗರವಾದ ಲಾಸ್ವೇಗಸ್ನಲ್ಲಿ ಶನಿವಾರ ತಾಪಮಾನವು 117 ಡಿಗ್ರಿ ಫ್ಯಾರನ್ಹೀಟ್ (47.2 ಡಿಗ್ರಿ ಸೆಲ್ಸಿಯಸ್)ಗೆ ತಲುಪಿದ್ದು, ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದೆಯೆಂದು ರಾಷ್ಟ್ರೀಯ ಹವಾಮಾನ ಸೇವಾಸಂಸ್ಥೆ (ಎನ್ಡಬ್ಲು ಎಸ್) ತಿಳಿಸಿದೆ. 1942ರಲ್ಲಿ ಮತ್ತು 2005ರ ಆನಂತರ ಇನ್ನೂ ಮೂರು ಬಾರಿ ಇಷ್ಟೇ ಪ್ರಮಾಣದ ತಾಪಮಾನ ದಾಖಲಾಗಿತ್ತೆಂದು ಅದು ಹೇಳಿದೆ.
 ‌
ಅಮೆರಿಕದ ದಕ್ಷಿಣ ಭಾಗದ ನಗರ ಸ್ಯಾನ್ಜೋಸ್ ಹಾಗೂ ಫೀನಿಕ್ಸ್ ಸೇರಿದಂತೆ ಇತರ ಹಲವಾರು ನಗರ ಕೇಂದ್ರಗಳಲ್ಲಿಯೂ ತಾಪಮಾನದಲ್ಲಿ ಭಾರೀ ಏರಿಕೆಯಾಗಲಿದೆಯೆಂದು ಎನ್ಡಬ್ಲುಎಸ್ ಎಚ್ಚರಿಕೆ ನೀಡಿದೆ.

‘‘3 ಕೋಟಿಗೂ ಅಧಿಕ ಮಂದಿ ಅತಿಯಾದ ತಾಪಮಾನದಿಂದ ಬಾಧಿತರಾಗಿದ್ದಾರೆ’’ ಎಂದು ಅದು ಶನಿವಾರ ತಿಳಿಸಿದೆ. ರವಿವಾರವಿಡೀ ಅಪಾಯಕಾರಿಯಾದ ಪ್ರಮಾಣ ದಲ್ಲಿ ಸೆಕೆ ಹಾಗೂ ಒಣವಾತಾವರಣ ಮುಂದುವರಿಯಲಿದೆಯೆಂದು ಅದು ಹೇಳಿದೆ.
 
ನೆರೆಯ ರಾಷ್ಟ್ರವಾದ ಕೆನಡದ ಬ್ರಿಟಿಶ್ ಕೊಲಂಬಿಯಾ ಪ್ರಾಂತದಲ್ಲಿಯೂ ಕಳೆದ ಮೂರು ದಿನಗಳಿಂದ ತಾಪಮಾನದಲ್ಲಿ ಸಾರ್ವಕಾಲಿಕ ದಾಖಲೆಯ ಏರಿಕೆಯಾಗಿದೆಯೆಂದು ವರದಿಗಳು ತಿಳಿಸಿವೆ.

ಉಭಯದೇಶಗಳಲ್ಲಿ ಬಿಸಿಲಿನ ಝಳಕ್ಕೆ ಬಲಿಯಾದವರ ನಿಖರ ಸಂಖ್ಯೆ ಇನ್ನೂ ಖಚಿತಗೊಂಡಿವಾದರೂ, ನೂರಾರು ಮಂದಿ ಸಾವನ್ನಪ್ಪಿರುವ ಸಾಧ್ಯತೆಯಿದೆಯೆಂದು ಅಂದಾಜಿ ಲಾಗಿದೆ.

ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ತಾಪಮಾನವು ಕೈಗಾರಿಕಾ ಪೂರ್ವ ಯುಗದಲ್ಲಿದ್ದ ತಾಪಮಾನಕ್ಕಿಂತ ಸರಾಸರಿ 1.5 ಡಿಗ್ರಿಯಷ್ಟು ಹೆಚ್ಚಳವನ್ನು ಕಾಣಲಿದೆಯೆಂದು ಬ್ರಿಟನ್ನ ಹವಾಮಾನ ಕಚೇರಿ ಹಾಗೂ ಜಾಗತಿಕ ಹವಾಮಾನ ಸಂಸ್ಥೆ ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News