ಜುಲೈ 22ರಂದು ಸಂಸತ್ತಿನ ಹೊರಗೆ ಶಾಂತಿಯುತ ಪ್ರತಿಭಟನೆ: ರಾಕೇಶ್ ಟೀಕಾಯತ್

Update: 2021-07-14 16:49 GMT

ಹೊಸದಿಲ್ಲಿ, ಜು. 14: ಜುಲೈ 22ರಂದು ಸಂಸತ್ತಿನ ಹೊರಗೆ ರೈತರ ಪ್ರತಿಭಟನೆ ಶಾಂತಿಯುತವಾಗಿ ನಡೆಯಲಿದೆ ಎಂದು ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ನಾಯಕ ರಾಕೇಶ್ ಟಿಯಾಯತ್ ಬುಧವಾರ ಹೇಳಿದ್ದಾರೆ. ಕಳೆದ ವರ್ಷ ಗಣರಾಜ್ಯೋತ್ಸವದ ದಿನ ರೈತರು ನಡೆಸಿದ ‘ಟ್ಯಾಕ್ಟರ್ ರ್ಯಾಲಿ’ ಹಿಂಸಾಚಾರಕ್ಕೆ ಕಾರಣವಾಗಿತ್ತು. ಆದರೆ, ಈ ಭಾರಿಯ ಪ್ರತಿಭಟನೆ ಶಾಂತಿಯುತವಾಗಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. 

ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 19ರಂದು ಆರಂಭಗೊಂಡು ಆಗಸ್ಟ್ 13ರಂದು ಪೂರ್ಣಗೊಳ್ಳಲಿದ್ದು, ಈ ಅವಧಿಯಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ‘‘ಇದು ಶಾಂತಿಯುತ ಪ್ರತಿಭಟನೆ ಆಗಿರಲಿದೆ. ಸಂಸತ್ತಿನಲ್ಲಿ ಕಲಾಪಗಳು ನಡೆಯುವ ಸಂದರ್ಭ ನಾವು ಹೊರಗೆ ಪ್ರತಿಭಟನೆ ನಡೆಲಿದ್ದೇವೆ’’ ಎಂದು ಟಿಕಾಯತ್ ಹೇಳಿದ್ದಾರೆ. 200 ರೈತರು ಬಸ್ ಮೂಲಕ ಸಂಸತ್ತಿಗೆ ತೆರಳಲಿದ್ದಾರೆ. ಬಸ್ ಶುಲ್ಕವನ್ನು ನಾವೇ ನೀಡಲಿದ್ದೇವೆ ಎಂದು ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News