ಶರದ್ ಪವಾರ್ ರಾಜ್ಯ ಮೈತ್ರಿ ಸರಕಾರದ ‘ರಿಮೋಟ್ ಕಂಟ್ರೋಲ್': ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಪಟೋಲೆ

Update: 2021-07-15 12:20 GMT

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ರಾಜ್ಯ ಮೈತ್ರಿ ಸರಕಾರದ "ರಿಮೋಟ್ ಕಂಟ್ರೋಲ್" ಆಗಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಬಣ್ಣಿಸಿದ್ದಾರೆ.

"ಶರದ್ ಪವಾರ್ ಅವರು ಮಹಾರಾಷ್ಟ್ರ ಸರಕಾರದ ರಿಮೋಟ್ ಕಂಟ್ರೋಲ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಾವು (ಕಾಂಗ್ರೆಸ್) ಯಾವುದೇ ದೊಡ್ಡ ನಾಯಕನ ವಿರುದ್ಧ ಹೇಳಿಕೆ ನೀಡುವುದಿಲ್ಲ, ಆದರೆ ಹೊರಗಿನ ಯಾರೇ ಆಗಲಿ ಹೇಳಿಕೆಗಳನ್ನು ನೀಡುವ ಮೊದಲು ತಮ್ಮದೇ ಪಕ್ಷದತ್ತ ಗಮನಹರಿಸಬೇಕು" ಎಂದು ನಾನಾ ಪಟೋಲೆ ಗುರುವಾರ ಹೇಳಿದರು .

"ರಿಮೋಟ್ ಕಂಟ್ರೋಲ್" ಎಂಬ ಪದದ ಋಣಾತ್ಮಕ ಅರ್ಥಗಳನ್ನು ತಗ್ಗಿಸಲು ಪಟೋಲೆ ಪ್ರಯತ್ನಿಸಿದರು.

 "ಶರದ್ ಪವಾರ್ ಎನ್‌ಸಿಪಿ ಮುಖ್ಯಸ್ಥರು, ನಾನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ. ಆದ್ದರಿಂದ ನಾವು ಕ್ರಮವಾಗಿ ನಮ್ಮ ಪಕ್ಷಗಳನ್ನು ಬಲಪಡಿಸಲು ಬಯಸುತ್ತೇವೆ. ಅವರು ರಿಮೋಟ್ ಕಂಟ್ರೋಲ್.  ಈ ಮಹಾ ವಿಕಾಸ್ ಅಘಾಡಿ ಸರಕಾರ ಮಾಡುವಲ್ಲಿ ಅವರ ದೊಡ್ಡ ಪಾತ್ರವಿದೆ. ಶರದ್ ಪವಾರ್ ನಮಗೆ ಮಾರ್ಗದರ್ಶನ ನೀಡುತ್ತಾರೆ. ಆದ್ದರಿಂದ ಅವರು ರಿಮೋಟ್ ಕಂಟ್ರೋಲ್ "ಎಂದು ಅವರು ಸಮಾಜಾಯಿಷಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News