ಅಮೆರಿಕದ ಕಾಲೇಜಿನಲ್ಲಿ ಅಧ್ಯಯನ ಮಾಡಲು ಹೈದರಾಬಾದ್ ಬಾಲಕಿಗೆ 2 ಕೋಟಿ ರೂ. ವಿದ್ಯಾರ್ಥಿ ವೇತನ

Update: 2021-07-16 17:46 GMT
ಲ್ಯಾಫಾಯೆಟ್ ಕಾಲೇಜು, photo: Express News Service

ಹೈದರಾಬಾದ್: ಅಮೆರಿಕದ ಲ್ಯಾಫಾಯೆಟ್ ಕಾಲೇಜಿನಲ್ಲಿ  ಪದವಿ ಪಡೆಯಲು 17 ವರ್ಷದ ನಗರದ ವಿದ್ಯಾರ್ಥಿನಿ ಶ್ವೇತಾ ರೆಡ್ಡಿ ಅವರು 2 ಕೋಟಿ ರೂ. ವಿದ್ಯಾರ್ಥಿ ವೇತನ ದಿಂದ ಗೌರವಿಸಲ್ಪಟ್ಟಿದ್ದಾರೆ.

ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಬೇಕೆಂಬ ಕನಸು ಕಂಡಿದ್ದ ಯುವ ಮತ್ತು ಕ್ರಿಯಾತ್ಮಕ ವಿದ್ಯಾರ್ಥಿನಿ ಲ್ಯಾಫಾಯೆಟ್ ಕಾಲೇಜಿನಲ್ಲಿ ಪ್ರತಿಷ್ಠಿತ ಡಯೆರ್ ಫೆಲೋಶಿಪ್ ಪಡೆದ ವಿಶ್ವದಾದ್ಯಂತದ ಆರು ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ.

ಪ್ರೊಫೆಸರ್ ಸಂಜಯ್ ರೆಡ್ಡಿ ಹಾಗೂ  ಡಾ. ಆಂದಾಲ್ ರೆಡ್ಡಿ ಅವರ ಪುತ್ರಿ, ಶ್ವೇತಾ ಪೆನ್ಸಿಲ್ವೇನಿಯಾದಲ್ಲಿರುವ ಲ್ಯಾಫಾಯೆಟ್ ಕಾಲೇಜಿನಲ್ಲಿ ಗಣಿತ ಹಾಗೂ  ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಪಡೆಯಲಿದ್ದಾರೆ.

ಈ ವಿದ್ಯಾರ್ಥಿವೇತನವನ್ನು ಪಡೆಯಲು ತಾನು ಉತ್ಸುಕಳಾಗಿದ್ದೇನೆ. ಇದು ವಿದೇಶದಲ್ಲಿ ಅಧ್ಯಯನ ಮಾಡಲು ಅವಕಾಶವನ್ನು ನೀಡುತ್ತದೆ ಎಂದು ಶ್ವೇತಾ ಪ್ರತಿಕ್ರಿಯಿಸಿದರು.

2 ಕೋಟಿ ರೂ.ಗಳ ವಿದ್ಯಾರ್ಥಿವೇತನವು ಲ್ಯಾಫಾಯಟ್ ನಲ್ಲಿ ಎಲ್ಲಾ ನಾಲ್ಕು ವರ್ಷಗಳ ಕಾಲ ಶ್ವೇತಾ ಅವರ ಸಂಪೂರ್ಣ ಬೋಧನೆ  ಹಾಗೂ  ವಾಸ್ತವ್ಯದ ವೆಚ್ಚವನ್ನು ಭರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News