ಕೋವಿಡ್ ಸೋಂಕಿತರಲ್ಲಿ ಹೆಚ್ಚುತ್ತಿರುವ ಕ್ಷಯರೋಗ: ಪರೀಕ್ಷೆಯ ಅಗತ್ಯದ ಬಗ್ಗೆ ಮರು ಉಚ್ಚರಿಸಿದ ಕೇಂದ್ರ ಸರಕಾರ‌

Update: 2021-07-17 17:50 GMT

ಹೊಸದಿಲ್ಲಿ, ಜು.17: ಕೊರೋನ ಸಾಂಕ್ರಾಮಿಕ ರೋಗದ ನಡುವೆ ಕ್ಷಯರೋಗದ ಪ್ರಕರಣಗಳು ಹೆಚ್ಚುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಎಲ್ಲಾ ಕೊರೋನ ಸೋಂಕಿತರನ್ನು ಕ್ಷಯ ರೋಗ ಪರೀಕ್ಷೆಗೆ ಒಳಪಡಿಸಬೇಕು ಎಂಬ ಶಿಫಾರಸನ್ನು ಪುನರುಚ್ಚರಿಸಿದೆ. ಕೋವಿಡ್ ಸೋಂಕಿಗೆ ಒಳಗಾದವರಲ್ಲಿ ಕ್ಷಯರೋಗದ ಪ್ರಕರಣಗಳು ಹೆಚ್ಚುತ್ತಿರುವ ಬಗೆಗಿನ ವರದಿಗಳ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯ ಈ ಸಲಹೆ ನೀಡಿದೆ. ಎಲ್ಲಾ ಕೊರೋನ ಸೋಂಕಿತರು ಕ್ಷಯರೋಗದ ಪರೀಕ್ಷೆಗೆ ಒಳಗಾಗುವಂತೆ ಹಾಗೂ ಎಲ್ಲ ಕ್ಷಯ ರೋಗಿಗಳು ಕೊರೋನ ಪರೀಕ್ಷೆಗೆ ಒಳಗಾಗುವಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಶಿಫಾರಸು ಮಾಡುತ್ತದೆ ಎಂದು ಅದು ಸ್ಪಷ್ಟಪಡಿಸಿದೆ.

ಕ್ಷಯರೋಗ ಹಾಗೂ ಕೊರೋನ ಪ್ರಕರಣಗಳ ಪತ್ತೆ ಹಚ್ಚುವಿಕೆ ಹಾಗೂ ಉತ್ತಮ ನಿಗಾಕ್ಕೆ ಪ್ರಯತ್ನಿಸುವಂತೆ 2020 ಆಗಸ್ಟ್‌ಗಿಂತ ಮೊದಲೇ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಗಿದೆ ಎಂದು ಕೇಂದ್ರ ಸರಕಾರದ ಅಧಿಕೃತ ಹೇಳಿಕೆ ತಿಳಿಸಿದೆ. ರಾಜ್ಯ ಹಾಗೂ ಕೇಂದ್ರಾಡಳಿದ ಪ್ರದೇಶಗಳಲ್ಲಿ ಕ್ಷಯರೋಗ-ಕೊರೋನ ಹಾಗೂ ಟಿಬಿ-ಐಎಲ್‌ಐ/ಎಸ್‌ಎಆರ್‌ಐ ಅನ್ನು ದ್ವಿ-ದಿಕ್ಕಿನ ಪರೀಕ್ಷೆ ನಡೆಸುವ ಅಗತ್ಯತೆ ಇದೆ ಪುನರುಚ್ಚರಿಸಿದ್ದ ಕೇಂದ್ರ ಸರಕಾರ ತನ್ನ ಹಲವು ಸಲಹೆಗಳು ಹಾಗೂ ಮಾರ್ಗಸೂಚಿಗಳನ್ನು ಜಾರಿಗೊಳಿಸಿತ್ತು.

ಕೊರೋನ ಸಂಬಂಧಿತ ನಿರ್ಬಂಧಗಳ ಕಾರಣದಿಂದ 2020ರಲ್ಲಿ ಕ್ಷಯರೋಗದ ಪ್ರಕರಣಗಳು ಶೇ. 25ಕ್ಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಈ ಸಲಹೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News