ಮುಂಬೈನಲ್ಲಿ ಮುಂದುವರಿದ ಭಾರೀ ಮಳೆ: ರೆಡ್ ಅಲರ್ಟ್ ಘೋಷಣೆ

Update: 2021-07-19 16:52 GMT
ಸಾಂದರ್ಭಿಕ ಚಿತ್ರ

ಮುಂಬೈ ,ಜು.19: ಶನಿವಾರ ರಾತ್ರಿಯಿಂದ ಅಬ್ಬರದ ಮಳೆ,ಕಟ್ಟಡಗಳ ಕುಸಿತ,ಹಲವಾರು ಜೀವಹಾನಿಗಳಿಗೆ ಸಾಕ್ಷಿಯಾಗಿದ್ದ ಮುಂಬೈ ಮಹಾನಗರದ ಹಲವು ಭಾಗಗಳಲ್ಲಿ ಸೋಮವಾರ ಬೆಳಿಗ್ಗೆಯೂ ಭಾರೀ ಮಳೆಯು ಮುಂದುವರಿದಿದ್ದು,ಹವಾಮಾನ ಇಲಾಖೆಯು ಮಂಗಳವಾರ ಬೆಳಿಗ್ಗೆಯವರೆಗೆ 24 ಗಂಟೆಗಳ ರೆಡ್ ಅಲರ್ಟ್ ಘೋಷಿಸಿದೆ. ರಸ್ತೆಗಳಲ್ಲಿ ನೆರೆನೀರು ಸಂಗ್ರಹಗೊಂಡಿದ್ದು,ಸಂಚಾರ ದಟ್ಟಣೆಗಳಿಗೆ ಕಾರಣವಾಗಿದೆ.

‌ರವಿವಾರ ಭಾರೀ ಮಳೆಯಿಂದಾಗಿ ರಸ್ತೆ ಸಂಚಾರ ಮತ್ತು ರೈಲು ಸಂಚಾರಗಳಿಗೆ ತೀವ್ರ ವ್ಯತ್ಯಯವುಂಟಾಗಿತ್ತು. ಲೋಕಲ್ ರೈಲುಗಳ ಸಂಚಾರ ಸೋಮವಾರ ಆರಂಭಗೊಂಡಿದೆಯಾದರೂ ನಿಧಾನವಾಗಿ ಚಲಿಸುತ್ತಿವೆ.
 
ಭಾರೀ ಮಳೆಯಿಂದಾಗಿ ನಗರದಲ್ಲಿ ಕೋವಿಡ್ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕೂ ವ್ಯತ್ಯಯವುಂಟಾಗಿದೆ. ಥಾಣೆಯಲ್ಲಿ 51 ಕೇಂದ್ರಗಳ ಪೈಕಿ ಕೇವಲ ಎರಡು ಕೇಂದ್ರಗಳಲ್ಲಿ ಲಸಿಕೆಯ ಮೊದಲ ಡೋಸ್ ನೀಡಲಾಗುತ್ತಿದ್ದು,ಉಳಿದ ಕೇಂದ್ರಗಳು ಎರಡನೇ ಡೋಸ್ ನೀಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News