ಪೆಗಾಸಸ್ ಹಗರಣ: ಜುಲೈ 28ರಂದು ಶಶಿ ತರೂರ್ ನೇತೃತ್ವದ ಐಟಿ ಸಂಸದೀಯ ಸಮಿತಿ ಸಭೆ

Update: 2021-07-21 10:49 GMT

ಹೊಸದಿಲ್ಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಅಧ್ಯಕ್ಷತೆಯಲ್ಲಿ ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯು ಜುಲೈ 28 ರಂದು ಇಸ್ರೇಲಿ ಮಿಲಿಟರಿ ದರ್ಜೆಯ ಸ್ಪೈವೇರ್ ಪೆಗಾಸಸ್ ಬಳಸಿ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ವಿರೋಧ ಪಕ್ಷದ ನಾಯಕರು ಸಹಿತ ಇತರರ ಮೇಲೆ ಕಾನೂನುಬಾಹಿರ ಗೂಢಚರ್ಯೆ ನಡೆಸಲಾಗುತ್ತಿದೆ ಎಂಬ ವರದಿಯ ಬಗ್ಗೆ ಜುಲೈ 28ರಂದು ಚರ್ಚೆ ನಡೆಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಸ್ಥಾಯಿ ಸಮಿತಿಯು "ನಾಗರಿಕರ ದತ್ತಾಂಶ ಸುರಕ್ಷತೆ ಮತ್ತು ಗೌಪ್ಯತೆ" ಕುರಿತು ಚರ್ಚಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಗೃಹ ಸಚಿವಾಲಯ ಮತ್ತು ಸಂವಹನ ಸಚಿವಾಲಯದ ಪ್ರತಿನಿಧಿಗಳನ್ನು ಕರೆದು ಈ ವಿಷಯದ ಬಗ್ಗೆ ಕೇಳಲಾಗುವುದು.

 “ಅನಧಿಕೃತ ಕಣ್ಗಾವಲು ಆಶ್ರಯಿಸುವುದನ್ನು ಸರಕಾರ ನಿರಾಕರಿಸಿದೆ. ಪೆಗಾಸಸ್ ಅನ್ನು ಸರಕಾರಗಳಿಗೆ ಮಾತ್ರ ಮಾರಾಟ ಮಾಡಿದರೆ, ಇತರ ಯಾವ ಸರಕಾರಗಳು (ಚೀನಾ / ಪಾಕ್?) ಇದನ್ನು ಭಾರತದ ಪ್ರಮುಖ ನಾಗರಿಕರ ಮೇಲೆ ಕಣ್ಣಿಡಲು ಬಳಸುತ್ತಿವೆ?ಎಂಬ ಪ್ರಶ್ನೆಗಳು ಉದ್ಭವವಾಗುತ್ತವೆ”ಎಂದು ತರೂರ್ ಜುಲೈ 18 ರಂದು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News