ಉದ್ಯಮಿ ರಾಜ್ ಕುಂದ್ರಾ ಬಂಧನಕ್ಕೆ ಕಾರಣವಾದ ಬಂಗಲೆ ಮೇಲಿನ ಪೊಲೀಸರ ದಾಳಿ

Update: 2021-07-21 12:35 GMT

ಮುಂಬೈ: ಈ ವರ್ಷದ ಆರಂಭದಲ್ಲಿ ಮುಂಬೈ ಬಳಿಯ ಬಂಗಲೆಯೊಂದರಲ್ಲಿ ನಡೆದ ಅಶ್ಲೀಲ ಚಿತ್ರದ ಚಿತ್ರೀಕರಣವು ವ್ಯಾಪಕ ತನಿಖೆಗೆ ನಾಂದಿ ಹಾಡಿದ್ದು, ಇದು ಉದ್ಯಮಿ ರಾಜ್ ಕುಂದ್ರಾ ಸೋಮವಾರ ಬಂಧನಕ್ಕೊಳಗಾಗಲು ಕಾರಣವಾಯಿತು. ಫೆಬ್ರವರಿಯಲ್ಲಿ ಆರಂಭವಾದ ತನಿಖೆಯು  ಕಳೆದ ವಾರಗಳಲ್ಲಿ ಮತ್ತೆ ವೇಗವನ್ನು ಪಡೆದುಕೊಂಡಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾಗಿ NDTV ವರದಿ ಮಾಡಿದೆ.

ಫೆಬ್ರವರಿ 4 ರಂದು, ಉತ್ತರ ಮುಂಬೈನ ಜನಪ್ರಿಯ ಬೀಚ್ ಗೆಟ್ಅವೇ ಮಾಧ್ ದ್ವೀಪದ ಬಂಗಲೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಅಶ್ಲೀಲ ಚಿತ್ರದ ಚಿತ್ರೀಕರಣದಲ್ಲಿ  ತೊಡಗಿದ್ದ  ಐವರು ಸಿಕ್ಕಿಬಿದ್ದಿದ್ದರು.ಆಗ ಅವರನ್ನು ಬಂಧಿಸಲಾಗಿದೆ.

ನೀಲಿ ಚಿತ್ರವನ್ನು  ಚಿತ್ರೀಕರಿಸುವಾಗ ಪೊಲೀಸರು ಬಂಗಲೆಯೊಳಗೆ ನುಗ್ಗಿದ್ದರು. ಬಂಗಲೆಯಿಂದ ರಕ್ಷಿಸಲ್ಪಟ್ಟ ಮಹಿಳೆಯೊಬ್ಬರು ದೂರುದಾರರಾಗಿದ್ದರು. ತನಿಖೆಯನ್ನು ಆರಂಭಿಸಲಾಗಿತ್ತು.

ದಾಳಿಯ ಕೆಲವು ದಿನಗಳ ನಂತರ ಪೊಲೀಸರು ಇನ್ನೂ ಇಬ್ಬರನ್ನು ಬಂಧಿಸಿದ್ದಾರೆ. 

ಅಶ್ಲೀಲ ತುಣುಕುಗಳನ್ನು ಅಪ್‌ಲೋಡ್ ಮಾಡಿದ ಹಾಗೂ  ಹಂಚಿಕೊಳ್ಳುವ ಅಪ್ಲಿಕೇಶನ್‌ಗಳತ್ತ ವಿಶೇಷವಾಗಿ 'ಹಾಟ್‌ಶಾಟ್ಸ್'ಗಳತ್ತ ಪೊಲೀಸರ ತನಿಖೆ ವರ್ಗಾಯಿಸಲ್ಪಟ್ಟಿತು.

ಬ್ರಿಟನ್  ಮೂಲದ ಸಂಸ್ಥೆ ಕೆನ್ರಿನ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ಕಾಮತ್‌ ರನ್ನು  ಪೊಲೀಸರು ವಿಚಾರಣೆ ನಡೆಸಿದ್ದರು.

ಉಮೇಶ್ ಕಾಮತ್ ಅವರು ರಾಜ್ ಕುಂದ್ರಾ ಅವರ ಮಾಜಿ ವೈಯಕ್ತಿಕ ಸಹಾಯಕರಾಗಿದ್ದರು ಹಾಗೂ ಅವರನ್ನು  ಪ್ರಶ್ನಿಸುವಾಗ ಕುಂದ್ರಾ ಹೆಸರನ್ನು  ಹೇಳಿದ್ದಾನೆ ಎಂದು ವರದಿಯಾಗಿದೆ.

ಕಾಮತ್‌ನ ಬಂಧನ ಹಾಗೂ  ನಂತರದ ತನಿಖೆಯು ಪೊಲೀಸರನ್ನು ರಾಜ್ ಕುಂದ್ರನತ್ತ ಕರೆದೊಯ್ಯಿತು. ಅಪ್ಲಿಕೇಶನ್‌ನಲ್ಲಿ ಕುಂದ್ರಾ ಭಾಗಿಯಾಗಿರುವುದು ತನಿಖೆಗೆ ಹೊಸ ದಿಕ್ಕು ತೋರಿಸಿತು.

ಕೆನ್ರಿನ್ ಸಂಸ್ಥೆಈ ಆ್ಯಪ್ ಹೊಂದಿದ್ದರೆ, ಮುಂಬೈ ಮೂಲದ ರಾಜ್ ಕುಂದ್ರಾ ಒಡೆತನದ ವಿಯಾನ್ ಇಂಡಸ್ಟ್ರೀಸ್ ಕಂಪನಿಯು ಹಾಟ್‌ಶಾಟ್ಸ್ ಆ್ಯಪ್ ಚಾಲನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News