×
Ad

ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಪೆಗಾಸಸ್ ಬಳಸಲಾಗಿಲ್ಲ : ಎನ್‌ಎಸ್‌ಒ ಗ್ರೂಪ್

Update: 2021-07-22 20:43 IST

ಹರ್ಝ್‌ಲಿಯ (ಇಸ್ರೇಲ್), ಜು. 22: ಪೆಗಾಸಸ್ ಬೇಹುಗಾರಿಕೆ ಸಾಫ್ಟ್ ವೇರನ್ನು ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಮೇಲೆ ಬೇಹುಗಾರಿಕೆ ನಡೆಸಲು ಬಳಸಲಾಗಿಲ್ಲ ಎಂದು ಇಸ್ರೇಲ್‌ನ ಸೈಬರ್‌ಸೆಕ್ಯುರಿಟಿ ಕಂಪೆನಿ ಎನ್‌ಎಸ್‌ಒ ಗ್ರೂಪ್ ಬುಧವಾರ ಹೇಳಿದೆ.

ಮ್ಯಾಕ್ರೋನ್ ಸೇರಿದಂತೆ ದೇಶಗಳ ಮುಖ್ಯಸ್ಥರು, ಹಲವಾರು ಪತ್ರಕರ್ತರು ಮತ್ತು ಮಾನವಹಕ್ಕುಗಳ ಕಾರ್ಯಕರ್ತರ ಮೇಲೆ ಬೇಹುಗಾರಿಕೆ ನಡೆಸಲು ಪೆಗಾಸಸ್ ಸಾಫ್ಟ್‌ವೇರನ್ನು ಬಳಸಲಾಗಿರುವುದರಿಂದ ಅದರ ರಫ್ತನ್ನು ನಿಲ್ಲಿಸುವಂತೆ ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಇಸ್ರೇಲನ್ನು ಒತ್ತಾಯಿಸಿದ ಬಳಿಕ ಸಾಫ್ಟ್‌ವೇರ್ ತಯಾರಕ ಕಂಪೆನಿ ಈ ಹೇಳಿಕೆ ನೀಡಿದೆ.

‘‘ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಈ ಬೇಹುಗಾರಿಕೆ ತಂತ್ರಜ್ಞಾನದ ಗುರಿಯಾಗಿಲ್ಲ ಎಂಬುದಾಗಿ ನಾವು ಖಂಡಿವಾಗಿ ಹೇಳಬಲ್ಲೆವು’’ ಎಂದು ಎನ್‌ಎಸ್‌ಒ ಗ್ರೂಪ್‌ನ ಚೀಫ್ ಕಾಂಪ್ಲಿಯನ್ಸ್ ಅಧಿಕಾರಿ ಚೈಮ್ ಗೆಲ್ಫಾಂಡ್ ‘ಐ24 ನ್ಯೂಸ್’ ಟೆಲಿವಿಶನ್ ನೆಟ್‌ವರ್ಕ್‌ಗೆ ತಿಳಿಸಿದರು.

‘‘ಆದರೆ. ಕೆಲವು ನಿರ್ದಿಷ್ಟ ಪ್ರಕರಣಗಳನ್ನು ನಮ್ಮ ಗಮನಕ್ಕೆ ತರಲಾಗಿದೆ. ಈ ವಿಷಯದಲ್ಲಿ ನಮಗೆ ತೃಪ್ತಿಯಿಲ್ಲ. ಇಂಥ ಪ್ರಕರಣಗಳಲ್ಲಿ ಕಂಪೆನಿಯು ಸಾಮಾನ್ಯವಾಗಿ ಗ್ರಾಹಕನನ್ನು ಸಂಪರ್ಕಿಸಿ ವಿವರಣೆ ಕೇಳುತ್ತದೆ ಹಾಗೂ ಈ ತಂತ್ರಜ್ಞಾನವನ್ನು ಬಳಸಲು ಅವರು ಕೊಡುವ ಕಾರಣಗಳು ಸರಿಯಾಗಿದೆಯೇ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಬಯಸುತ್ತದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News