ಮೊದಲ ಟ್ವೆಂಟಿ-20 ಪಂದ್ಯ:ಶ್ರೀಲಂಕಾಕ್ಕೆ 165 ರನ್ ಗುರಿ ನೀಡಿದ ಭಾರತ

Update: 2021-07-25 16:32 GMT

ಕೊಲಂಬೊ: ಸೂರ್ಯಕುಮಾರ್ ಯಾದವ್(50, 34 ಎಸೆತ)ಅರ್ಧಶತಕ ಹಾಗೂ ನಾಯಕ ಶಿಖರ್ ಧವನ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ತಂಡಕ್ಕೆ ಮೊದಲ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದ ಗೆಲುವಿಗೆ 165 ರನ್ ಗುರಿ ನೀಡಿದೆ.

ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ  ಭಾರತವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿತು. ಭಾರತವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 164 ರನ್ ಗಳಿಸಿತು.

ಭಾರತವು ತಾನೆದುರಿಸಿದ ಮೊದಲ ಓವರ್ ನ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ನಾಯಕ ಧವನ್ ರೊಂದಿಗೆ ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ(0)ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು. ಆಗ ಜೊತೆಯಾದ ಧವನ್ (46, 36 ಎಸೆತ, 4 ಬೌಂಡರಿ, 1 ಸಿ.) ಹಾಗೂ ಸಂಜು ಸ್ಯಾಮ್ಸನ್(27, 20 ಎಸೆತ)2ನೇ ವಿಕೆಟ್ ಗೆ 51 ರನ್ ಸೇರಿಸಿ ತಂಡವನ್ನು ಆಧರಿಸಿದರು.

ಸಂಜು ಔಟಾದಾಗ ಸೂರ್ಯಕುಮಾರ್ ಅವರೊಂದಿಗೆ ಕೈಜೋಡಿಸಿದ ಧವನ್ 3ನೇ ವಿಕೆಟ್ ಗೆ 62 ರನ್ ಜೊತೆಯಾಟದಲ್ಲಿ ಪಾಲ್ಗೊಂಡರು. ಸೂರ್ಯಕುಮಾರ್ ಬರೋಬ್ಬರಿ 50 ರನ್ (34 ಎಸೆತ, 5 ಬೌಂಡರಿ, 2 ಸಿಕ್ಸರ್)ಗಳಿಸಿ ಡಿ'ಸಿಲ್ವಾಗೆ ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್ ಔಟಾಗದೆ 20 ರನ್ ಗಳಿಸಿ ತಂಡದ ಮೊತ್ತವನ್ನು 164ಕ್ಕೆ ತಲುಪಿಸಿದರು.

ಶ್ರೀಲಂಕಾದ ಪರವಾಗಿ  ದುಷ್ಮಂಥಾ ಚಾಮೀರ(2-24) ಹಾಗೂ ವನಿಂದು ಹಸರಂಗ(2-28)ತಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News