ಮಹಾರಾಷ್ಟ್ರ ಮಳೆ ದುರಂತ: ಸಾವಿನ ಸಂಖ್ಯೆ 164ಕ್ಕೇರಿಕೆ,100 ಜನರು ಇನ್ನೂ ನಾಪತ್ತೆ

Update: 2021-07-26 14:46 GMT
photo :PTI

ಮುಂಬೈ, ಜು.26: ರಾಯಗಡದಲ್ಲಿ ಇನ್ನೂ 11 ಹಾಗೂ ವಾರ್ಧಾ ಮತ್ತು ಅಕೋಲಾಗಳಲ್ಲಿ ತಲಾ ಎರಡು ಶವಗಳು ಪತ್ತೆಯಾಗುವುದರೊಂದಿಗೆ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ನೆರೆ, ಭೂಕುಸಿತ ಮತ್ತು ಇತರ ಮಳೆ ಸಂಬಂಧಿತ ದುರ್ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 164ಕ್ಕೇರಿದ್ದು,100 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಮತ್ತು 56 ಜನರು ಗಾಯಗೊಂಡಿದ್ದಾರೆ ಎಂದು ರಾಜ್ಯ ಸರಕಾರವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ನೆರೆಪೀಡಿತ ಪ್ರದೇಶಗಳಿಂದ ಈವರೆಗೆ 2,29,074 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.
ರಾಯಗಡ ಜಿಲ್ಲೆಯಲ್ಲಿ 71 ಜನರು ಮೃತಪಟ್ಟಿದ್ದರೆ, ಸಾತಾರಾದಲ್ಲಿ 41,ರತ್ನಾಗಿರಿಯಲ್ಲಿ 21,ಥಾಣೆಯಲ್ಲಿ 12,ಕೊಲ್ಲಾಪುರದಲ್ಲಿ ಏಳು,ಮುಂಬೈನಲ್ಲಿ ನಾಲ್ವರು ಹಾಗೂ ಸಿಂಧುದುರ್ಗ,ಪುಣೆ,ವಾರ್ಧಾ ಮತ್ತು ಅಕೋಲಾದಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ.

 ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಸೋಮವಾರ ಸಾಂಗ್ಲಿ ಜಿಲ್ಲೆಯ ನೆರೆ ಪೀಡಿತ ಗ್ರಾಮಗಳಿಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು. ನೆರೆ ಸಂತ್ರಸ್ತರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ ಅವರು ರಾಜ್ಯಸರಕಾರದಿಂದ ಪುನರ್ವಸತಿ ಮತ್ತು ಎಲ್ಲ ನೆರವಿನ ಭರವಸೆಯನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News