ಭಾರತೀಯ ಸೇನೆಯಲ್ಲಿ 90 ಸಾವಿರ ಹುದ್ದೆ ಖಾಲಿ: ಸಚಿವ ಅಜಯ್ ಭಟ್

Update: 2021-07-26 19:31 GMT

ಹೊಸದಿಲ್ಲಿ, ಜು. 26: ಭಾರತೀಯ ಸೇನೆ 7,900ಕ್ಕೂ ಅಧಿಕ ಅಧಿಕಾರಿಗಳ ಕೊರತೆ ಎದುರಿಸುತ್ತಿರುವ ಸಂದರ್ಭ ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಅಧಿಕಾರಿಗಳು ಸೇರಿದಂತೆ 90 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ರಕ್ಷಣಾ ಖಾತೆಯ ಸಹಾಯಕ ಸಚಿವ ಅಜಯ್ ಭಟ್ ರಾಜ್ಯಸಭೆಯಲ್ಲಿ ಎತ್ತಲಾದ ಪ್ರಶ್ನೆಯೊಂದಕ್ಕೆ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಎಲ್ಲಾ ಮೂರು ರಕ್ಷಣಾ ಪಡೆಗಳಲ್ಲಿ ಗಾತ್ರದ ವಿಚಾರದಲ್ಲಿ ಮೂರನೇಯದ್ದು ಎಂದು ಪರಿಗಣಿಸಲಾಗಿರುವ ನೌಕಾ ಪಡೆ ಮಾನವ ಸಂಪನ್ಮೂಲದ ಕೊರತೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ 1,190 ಅಧಿಕಾರಿಗಳು 11,927 ನಾವಿಕರ ಕೊರತೆ ಇದೆ.

ಭೂಸೇನೆಯಲ್ಲಿ 7,912 ಅಧಿಕಾರಿಗಳು ಹಾಗೂ 90,640 ಯೋಧರ ಕೊರತೆ ಇದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ವಾಯು ಪಡೆಯಲ್ಲಿ 610 ಅಧಿಕಾರಿಗಳು ಹಾಗೂ 7,104 ಸಿಬ್ಬಂದಿಗಳ ಕೊರತೆ ಇದೆ ಎಂದು ಭಟ್ ರಾಜ್ಯಸಭೆಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News