ಪೆಗಾಸಸ್ ಹಗರಣ:ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಪ್ರಮುಖ ವಿಪಕ್ಷಗಳ ಸಭೆ

Update: 2021-07-28 07:26 GMT
photo: ANI

ಹೊಸದಿಲ್ಲಿ: ಪೆಗಾಸಸ್ ಫೋನ್ ಹ್ಯಾಕಿಂಗ್ ಹಗರಣದ ಬಗ್ಗೆ ಕೇಂದ್ರವನ್ನು ಸಂಸತ್ತಿನಲ್ಲಿ ತರಾಟೆಗೆ ತೆಗೆದುಕೊಳ್ಳಲು  ಕಾರ್ಯತಂತ್ರವನ್ನು ರೂಪಿಸಲು ಕಾಂಗ್ರೆಸ್ ನೇತೃತ್ವದ 14 ಪ್ರಮುಖ ವಿರೋಧ ಪಕ್ಷಗಳು ಬುಧವಾರ ದಿಲ್ಲಿಯಲ್ಲಿ ಸಭೆ ಸೇರಿವೆ., ಪೆಗಾಸಸ್ ಹಗರಣವು  ಭಾರಿ ಪ್ರತಿಭಟನೆಗೆ ಕಾರಣವಾಗಿದ್ದು  ಇದೇ ಕಾರಣಕ್ಕೆ ಸಂಸತ್ತಿನ ಮಾನ್ಸೂನ್ ಅಧಿವೇಶನವು ಪದೇ ಪದೇ ಮುಂದೂಡಿಕೆ ಯಾಗಿತ್ತು.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಹೆಸರು ಕಣ್ಗಾವಲು ಗುರಿಗಳ ಪಟ್ಟಿಯಲ್ಲಿದೆ . ಕಾಂಗ್ರೆಸ್  ಪಕ್ಷದ ಇತರ ನಾಯಕರು, ಶಿವಸೇನೆ, ಸಿಪಿಐ ಹಾಗೂ  ಸಿಪಿಎಂ, ರಾಷ್ಟ್ರೀಯ ಜನತಾದಳ, ಎಎಪಿ ಹಾಗೂ ತಮಿಳುನಾಡು ಡಿಎಂಕೆ ಸಭೆಯಲ್ಲಿ ಭಾಗಿಯಾಗಿದ್ದವು.

ಎನ್‌ಸಿಪಿ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಮುಸ್ಲಿಂ ಲೀಗ್ ಕೂಡ ಸಭೆಯ ಭಾಗವಾಗಿದೆ.  ಪ್ರಧಾನ ಮಂತ್ರಿ ಮೋದಿ ಅವರು "ಸಂಸತ್ತನ್ನು ನಡೆಸಲು ವಿಪಕ್ಷಗಳು ಬಿಡುತ್ತಿಲ್ಲ" ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ನಂತರ ಈ ಸಭೆ ನಡೆದಿದೆ.

ಎಲ್ಲ 14 ಪಕ್ಷಗಳ ಪ್ರತಿನಿಧಿಗಳು ಮಧ್ಯಾಹ್ನ 12:30ಕ್ಕೆ ಸುದ್ದಿಗೋಷ್ಟಿಯನ್ನು ನಡೆಸಲಿದ್ದಾರೆ.

ಸಂಸತ್ತಿನ ಉಭಯ ಸದನಗಳಲ್ಲಿ ಪೆಗಾಸಸ್ ಹಗರಣ ಹಾಗೂ  ರೈತರ ಪ್ರತಿಭಟನೆ ಕುರಿತು ಚರ್ಚಿಸಲು ಕೇಂದ್ರವನ್ನು ನಿರ್ದೇಶಿಸುವಂತೆ ಏಳು ವಿರೋಧ ಪಕ್ಷಗಳು ಮಂಗಳವಾರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಪತ್ರ ಬರೆದ ನಂತರ ಇಂದಿನ ಸಭೆ ನಡೆದಿದೆ.

ಈ ಪತ್ರಕ್ಕೆ ಮಾಯಾವತಿಯ ಬಹುಜನ ಸಮಾಜ ಪಕ್ಷ, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ, ಅಕಾಲಿ ದಳ, ನ್ಯಾಶನಲ್ ಕಾನ್ಫರೆನ್ಸ್,  ಸಿಪಿಐಸಿಪಿಎಂ ಹಾಗೂ ಶರದ್ ಪವಾರ್ ಅವರ ಎನ್‌ಸಿಪಿ ಸಹಿ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News