ಅಶ್ಲೀಲ ಚಿತ್ರ ತಯಾರಿ ಪ್ರಕರಣ: ರಾಜ್ ಕುಂದ್ರಾಗೆ ಜಾಮೀನು ನಿರಾಕರಿಸಿದ ಮುಂಬೈ ನ್ಯಾಯಾಲಯ

Update: 2021-07-28 11:58 GMT

ಹೊಸದಿಲ್ಲಿ: ಅಶ್ಲೀಲ ಚಿತ್ರ ತಯಾರಿ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಹಾಗೂ  ರಿಯಾನ್ ಥೋರ್ಪ್ ಅವರ ಜಾಮೀನು ಅರ್ಜಿಯನ್ನು ಮುಂಬೈನ  ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ. ಕುಂದ್ರಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಅಶ್ಲೀಲ ಪ್ರಕರಣದಲ್ಲಿ ರಾಜ್ ಕುಂದ್ರಾ ಹಾಗೂ ರಿಯಾನ್ ಥೋರ್ಪ್ ಅವರ ಜಾಮೀನು ಅರ್ಜಿಯನ್ನು ಮುಂಬೈನ ಎಸ್ಪ್ಲನೇಡ್ ನ್ಯಾಯಾಲಯ ತಿರಸ್ಕರಿಸಿದೆ ಎಂದು ಸುದ್ದಿ ಸಂಸ್ಥೆ ANI ಟ್ವೀಟಿಸಿದೆ.

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರ ತಯಾರಿ ಹಾಗೂ ಅದನ್ನುಆ್ಯಪ್ ಗಳ ಮೂಲಕ ಹಂಚಿಕೊಂಡ ಆರೋಪದಲ್ಲಿ ಜುಲೈ 19 ರಂದು ಮುಂಬೈ ಕ್ರೈಂ ಬ್ರಾಂಚ್ ಬಂಧಿಸಿತ್ತು.

45 ವರ್ಷದ ಉದ್ಯಮಿ ಕಳೆದ ವರ್ಷ ಆಗಸ್ಟ್ ಮತ್ತು ಡಿಸೆಂಬರ್ ನಡುವೆ ಕನಿಷ್ಠ 1.17 ಕೋಟಿ ರೂ.ಗಳನ್ನು ಅಶ್ಲೀಲ ಚಿತ್ರಗಳ ತಯಾರಿ ವ್ಯವಹಾರ ಹಾಗೂ  ಆನ್‌ಲೈನ್ ವಿತರಣೆಯಿಂದ ಗಳಿಸಿದ್ದಾನೆ ಎಂದು ಪೊಲೀಸರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಿದರು ಎಂದು ಪಿಟಿಐ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News