ಆರ್ಚರಿ: ಕ್ವಾರ್ಟರ್ ಫೈನಲ್ ನಲ್ಲಿ ದೀಪಿಕಾ ಕುಮಾರಿಗೆ ಸೋಲು

Update: 2021-07-30 06:23 GMT

ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಭರವಸೆಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರ ವೈಯಕ್ತಿಕ ವಿಭಾಗದ ಸವಾಲು ಅಂತ್ಯವಾಗಿದೆ.

ಶುಕ್ರವಾರ ನಡೆದ ಮಹಿಳೆಯರ ವೈಯಕ್ತಿಕ ವಿಭಾಗದ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ದೀಪಿಕಾ ಅವರು ದಕ್ಷಿಣ ಕೊರಿಯಾದ ಸ್ಯಾನ್ ಆ್ಯನ್ ವಿರುದ್ಧ 0-6 ಅಂತರದಿಂದ ಸೋತಿದ್ದಾರೆ.

ಇದಕ್ಕೂ ಮೊದಲು ನಡೆದಿದ್ದ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ದೀಪಿಕಾ ಅವರು ರಷ್ಯಾದ ಕ್ಸೇನಿಯಾ ಪೆರೋವಾ ವಿರುದ್ಧ 6-5 ಸೆಟ್‌ಗಳಿಂದ ಜಯ ಸಾಧಿಸಿ  ಕ್ವಾರ್ಟರ್ ಫೈನಲ್ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News