ಪ್ರಥಮ ಹಂತದಲ್ಲಿ ಅಮೆರಿಕಕ್ಕೆ 221 ಅಪಘಾನಿಸ್ತಾನೀಯರ ಸ್ಥಳಾಂತರ

Update: 2021-07-30 16:55 GMT

ವಾಷಿಂಗ್ಟನ್, ಜು.30: ಅಪಘಾನಿಸ್ತಾನದಲ್ಲಿ ಅಮೆರಿಕದ ಸೇನೆಯನ್ನು ನಿಯೋಜನೆಗೊಳಿಸಿದ್ದ ಸಂದರ್ಭ ಅಮೆರಿಕನ್ನರೊಂದಿಗೆ ಕೆಲಸ ಮಾಡಿದ್ದ ಅಪಘಾನ್ ಪ್ರಜೆಗಳನ್ನು ವಿಮಾನದ ಮೂಲಕ ಅಮೆರಿಕಕ್ಕೆ ಸ್ಥಳಾಂತರಿಸಲಾಗಿದ್ದು , ಪ್ರಥಮ ಹಂತದ ಈ ಸ್ಥಳಾಂತರ ಪ್ರಕ್ರಿಯೆಯಲ್ಲಿ ಮಕ್ಕಳು, ಶಿಶುಗಳ ಸಹಿತ 221 ಮಂದಿಗೆ ಅಮೆರಿಕದಲ್ಲಿ ಪುನರ್ವವ್ಯಸ್ಥೆ ಕಲ್ಪಿಸಲಾಗುವುದು ಎಂದು ಅಮೆರಿಕ ಅ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.

   ‌
ಅಪಘಾನಿಸ್ತಾನದಲ್ಲಿ ಅಮೆರಿಕದ ಸೇನೆಯನ್ನು ನಿಯೋಜಿಸಲಾಗಿದ್ದಾಗ ಇವರಿಗೆ ದುಬಾಷಿಗಳಾಗಿ ಹಾಗೂ ಇತರ ಕಾರ್ಯಕ್ಕೆ ಸ್ಥಳೀಯರನ್ನು ನೇಮಿಸಲಾಗಿತ್ತು. ಇದೀಗ ಅಲ್ಲಿಂದ ಅಮೆರಿಕದ ಸೇನೆ ವಾಪಸಾತಿ ಆರಂಭವಾಗುತ್ತಿದ್ದಂತೆಯೇ, ಇವರ ವಿರುದ್ಧ ತಾಲಿಬಾನ್ಗಳು ಪ್ರತೀಕಾರ ತೀರಿಸಿಕೊಳ್ಳುವ ಭೀತಿಯ ಹಿನ್ನೆಲೆಯಲ್ಲಿ ಸುಮಾರು 20,000 ಮಂದಿ ಅಮೆರಿಕಕ್ಕೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದಾರೆ. ಪ್ರಥಮ ವೈಮಾನಿಕ ಕಾರ್ಯಾಚರಣೆಯಲ್ಲಿ 57 ಮಕ್ಕಳು, 15 ಶಿಶುಗಳ ಸಹಿತ 221 ಮಂದಿಯನ್ನು ಅಲ್ಲಿಂದ ತೆರವುಗೊಳಿಸಲಾಗಿದೆ ಎಂದು ಅಮೆರಿಕ ಸರಕಾರದ ಹೇಳಿಕೆಯನ್ನು ಉಲ್ಲೇಖಿಸಿ ‘ದಿ ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ.

ಕಳೆದ 20 ವರ್ಷದಿಂದ ಅಮೆರಿಕದ ರಾಜತಾಂತ್ರಿಕರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕಾರ್ಯನಿರ್ವಹಿಸಿದ ಸಾವಿರಾರು ಅಪಘಾನಿಸ್ತಾನೀಯರಿಗೆ ನೀಡಿದ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಮೈಲುಗಲ್ಲಾಗಿದೆ. ಇವರನ್ನೆಲ್ಲಾ ಅಮೆರಿಕಕ್ಕೆ ಸ್ವಾಗತಿಸಲು ನನಗೆ ಹೆಮ್ಮೆಯಾಗುತ್ತಿದೆ . ಅಪಘಾನೀಸ್ತೀಯರ ಸ್ಥಳಾಂತರದ ಬಗ್ಗೆ ಧ್ವನಿ ಎತ್ತಿದ ಮಾಜಿ ಯೋಧರು, ರಾಜತಾಂತ್ರಿಕರು ಹಾಗೂ ಇತರರನ್ನು ಗೌರವಿಸಲು ಬಯಸುತ್ತೇನೆ ಎಂದು ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.

 ಅಪಘಾನ್ ವೀಸಾ ಯೋಜನೆ ಅಡಿಯಲ್ಲಿ 8000 ಹೆಚ್ಚುವರಿ ವೀಸಾ ನೀಡಲು ಹಾಗೂ ಯೋಜನೆಗೆ ಆರ್ಥಿಕ ನೆರವು ಒದಗಿಸಲು 500 ಮಿಲಿಯನ್ ಅನುದಾನ ಬಳಕೆಗೆ ಅಮೆರಿಕ ಕಾಂಗ್ರೆಸ್  ಗುರುವಾರ ಅನುಮೋದನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News