ಭದ್ರತಾ ಅಧಿಕಾರಿಗಳಿಂದ ಕಿರುಕುಳ: ಕೋರ್ಟ್ ಮೊರೆ ಹೋದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ

Update: 2021-08-01 17:11 GMT

ಹೊಸದಿಲ್ಲಿ, ಆ.1: ರಕ್ಷಣೆಗೆಂದು ಸುಪ್ರೀಂ ಕೋರ್ಟ್ ನಿಯೋಜಿಸಿದ ಖಾಸಗಿ ಭದ್ರತಾಧಿಕಾರಿ (ಪಿಎಸ್ಒ)ಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ದಿಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಈ ಆರೋಪಕ್ಕೆ ಸಂಬಂಧಿಸಿ ಪರಿಣಾಮ ಅಂದಾಜು ವರದಿಯನ್ನು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಸಲ್ಲಿಸುವಂತೆ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಧರ್ಮೇಶ್ ಶರ್ಮಾ ಅವರು ಸಿಬಿಐಯ ತನಿಖಾಧಿಕಾರಿಗೆ ನಿರ್ದೇಶಿಸಿದ್ದಾರೆ.

‘‘ದೂರುದಾರರ ಪರವಾಗಿ ಸಲ್ಲಿಸಲಾದ ಮನವಿಯಲ್ಲಿ, ಆಕೆ ಹಾಗೂ ಆಕೆಯ ಕುಟುಂಬದ ಸದಸ್ಯರು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಿಯೋಜನೆಯಾದ ಪಿಎಸ್ಒ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.ಆಕೆಗೆ ಸ್ವಾತಂತ್ರವನ್ನು ಅನುಭವಿಸಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂಬುದು ಇದರ ಅರ್ಥ’’ ಎಂದು ನ್ಯಾಯಮೂರ್ತಿ ವೀಡಿಯೊ ಕಾನ್ಫರೆನ್ಸ್ ಮೂಲಕ ಜುಲೈ 31ರಂದು ಹೇಳಿದ್ದಾರೆ.

ದೂರುದಾರೆ ಹಾಗೂ ಆಕೆಯ ಕುಟುಂಬದ ಸದಸ್ಯರ ವಿರುದ್ಧ ಮಾಡಲಾದ ನಿರ್ದಿಷ್ಟ ಆರೋಪಗಳ ಕುರಿತು ಪೊಲೀಸರಿಂದ ಮೊಹರು ಹಾಕಲಾದ ಲಕೋಟೆಯನ್ನು ಕೂಡ ಸ್ವೀಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News