ಹಾಂಕಾಂಗ್: ಪ್ರಜಾಪ್ರಭುತ್ವ ಪರ ಗಾಯಕನ ಬಂಧನ

Update: 2021-08-02 17:03 GMT
photo: ndtv.com

ಹಾಂಕಾಂಗ್, ಆ. 2: 2018ರ ಚುನಾವಣಾ ಸಭೆಯೊಂದರಲ್ಲಿ ಭ್ರಷ್ಟ ವರ್ತನೆ ತೋರಿದ ಗಾಯಕ ಹಾಗೂ ಪ್ರಜಾಪ್ರಭುತ್ವ ಪರ ಹೋರಾಟಗಾರ ಆ್ಯಂಟನಿ ವೋಂಗ್ರನ್ನು ಬಂಧಿಸಲಾಗಿದೆ ಎಂದು ಹಾಂಕಾಂಗ್ ನ ಭ್ರಷ್ಟಚಾರ ನಿಗ್ರಹ ಪ್ರಾಧಿಕಾರ ಸೋಮವಾರ ತಿಳಿಸಿದೆ.

‌2018ರ ಲೆಜಿಸ್ಲೇಟಿವ್ ಕೌನ್ಸಿಲ್ ಉಪ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಾರ ಔ ನೊಕ್-ಹಿನ್ ಪರವಾಗಿ ಮತಗಳನ್ನ ಹಾಕುವಂತೆ ಜನರನ್ನು ಹುರಿದುಂಬಿಸಲು ವೋಂಗ್ ಜನರಿಗೆ ಮನರಂಜನೆ ನೀಡಿದ್ದರು ಎಂದು ಇಂಡಿಪೆಂಡೆಂಟ್ ಕಮಿಶನ್ ಅಗೆನ್ಸ್ಟ್ ಕರಪ್ಶನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆ ಸಭೆಯಲ್ಲಿ ವೋಂಗ್ ಎರಡು ಹಾಡುಗಳನ್ನು ಹಾಡಿದರು. ಕಾರ್ಯಕ್ರಮದ ಕೊನೆಯಲ್ಲಿ, ಪ್ರಜಾಪ್ರಭುತ್ವ ಪರ ಅಭ್ಯರ್ಥಿಗೆ ಮತಗಳನ್ನು ಹಾಕುವಂತೆ ಜನರಿಗೆ ಮನವಿ ಮಾಡಿದರು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News