×
Ad

ವೇಗವಾಗಿ ಹರಡುತ್ತಿರುವ ಆಫ್ರಿಕನ್‌ ಹಂದಿಜ್ವರ: ಹಂದಿ ಮಾಂಸ ಆಮದಿಗೆ ಎಲ್ ಸಾಲ್ವಡೋರ್ ನಿಷೇಧ

Update: 2021-08-02 21:40 IST

ಸಾನ್ ಸಾಲ್ವಡೋರ್ (ಎಲ್ ಸಾಲ್ವಡೋರ್), ಆ. 2: ಡೋಮಿನಿಕನ್ ರಿಪಬ್ಲಿಕ್ ದೇಶದಲ್ಲಿ ಅತ್ಯಂತ ಸಾಂಕ್ರಾಮಿಕ ಆಫ್ರಿಕನ್ ಹಂದಿ ಜ್ವರ ವೇಗವಾಗಿ ಹರಡುತ್ತಿರುವುದರಿಂದ ಎಲ್ಲ ಹಂದಿ ಮಾಂಸ ಆಮದನ್ನು ನಿಷೇಧಿಸುವುದಾಗಿ ಎಲ್ ಸಾಲ್ವಡೋರ್ ದೇಶವು ರವಿವಾರ ಘೋಷಿಸಿದೆ.

ಊರ ಮತ್ತು ಕಾಡ ಹಂದಿಗಳನ್ನು ಕಾಡುವ ಸಾಂಕ್ರಾಮಿಕ ರೋಗವಾಗಿರುವ ಆಫ್ರಿಕನ್ ಹಂದಿ ಜ್ವರ ಈಗ ಏಶ್ಯ, ಪೂರ್ವ ಯುರೋಪ್ ಮತ್ತು ಆಫ್ರಿಕಗಳಲ್ಲಿ ಹರಡುತ್ತಿದೆ.
2018ರಲ್ಲಿ ಈ ಸಾಂಕ್ರಾಮಿಕವು ಚೀನಾದಲ್ಲಿ ಭಾರೀ ಪ್ರಮಾಣದಲ್ಲಿ ಹರಡಿದ್ದು ಲಕ್ಷಾಂತರ ಹಂದಿಗಳನ್ನು ಕೊಲ್ಲಲಾಗಿತ್ತು.

ಮಧ್ಯ ಮತ್ತು ವಾಯುವ್ಯ ಡೋಮಿನಿಕನ್ ರಿಪಬ್ಲಿಕ್ ನ ಹಲವು ಪ್ರದೇಶಗಳಲ್ಲಿ ಕಳೆದ ವಾರ ಈ ಕಾಯಿಲೆ ಪತ್ತೆಯಾಗಿದೆ.

ದೇಶದಲ್ಲಿ ಬೆಳೆಸಲಾದ ಮತ್ತು ಸಂಸ್ಕರಿಸಲಾದ ಹಂದಿ ಮಾಂಸವನ್ನು ಮಾತ್ರ ತಿನ್ನಿ ಎಂದು ನಾನು ಜನರನ್ನು ಒತ್ತಾಯಿಸುತ್ತೇನೆ ಎಂದು ಎಲ್ ಸಾಲ್ವಡೋರ್ನ ಕೃಷಿ ಮತ್ತು ಪಶುಸಂಗೋಪನೆ ಸಚಿವ ಡೇವಿಡ್ ಮಾರ್ಟಿನೇರ್ ರವಿವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News