ಒಲಿಂಪಿಕ್ಸ್ : ಓಟದ ನಡುವೆ ಟ್ರ್ಯಾಕ್‌ ನಲ್ಲಿ ಬಿದ್ದರೂ ಪ್ರಥಮ ಸ್ಥಾನದೊಂದಿಗೆ ಗುರಿ ಮುಟ್ಟಿದ ಸಿಫಾನ್‌ ಹಸನ್

Update: 2021-08-02 18:41 GMT

ಟೋಕಿಯೊ: ಡಚ್ ಓಟಗಾರ್ತಿ ಸಿಫಾನ್ ಹಸನ್ ಸೋಮವಾರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 1,500 ಮೀಟರ್ ಓಟದ ಹೀಟ್ಸ್ ಸುತ್ತಿನಲ್ಲಿ ಭಾಗವಹಿಸಿದ್ದಾಗ  ಆಕೆಯ ಎದುರಿನ ಕೀನ್ಯಾದ ಓಟಗಾರ್ತಿ ಎಡಿನಾ ಜೆಬಿಟಾಕ್ ಕಾಲು ಜಾರಿ ಬಿದ್ದರು. ಹಸನ್ ಆಕೆಯ ಮೇಲೆ ಬಿದ್ದರು. ಈ ದೃಶ್ಯವನ್ನು ನೋಡಿದಾಗ ಇತಿಹಾಸವನ್ನು ನಿರ್ಮಿಸುವ ಹಸನ್  ಪ್ರಯತ್ನವು ಅಪಾಯದಲ್ಲಿರುವಂತೆ ಕಂಡುಬಂತು. ಆದರೆ, ಬೇಗನೆ ಎದ್ದುನಿಂತು ಓಡಲು ಆರಂಭಿಸಿದ ಹಸನ್ 1,500 ಮೀಟರ್ ಹೀಟ್ಸ್ ನಲ್ಲಿ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

ಹಸನ್  ಓಟದ ಮಧ್ಯೆ ಬಿದ್ದರೂ ತೀವ್ರ ಪೈಪೋಟಿ ಇದ್ದ ಸ್ಪರ್ಧೆಯಲ್ಲಿ 4:05.17 ಸೆಕೆಂಡ್ ನಲ್ಲಿ ಗುರಿ ತಲುಪಿದರು. ಸೋಮವಾರ ನಡೆದ ಒಲಿಂಪಿಕ್ಸ್ ನ 5,000 ಮೀಟರ್ ಓಟದಲ್ಲಿ ಸಿಫಾನ್ ಹಸನ್ ಚಿನ್ನದ ಪದಕ ಜಯಿಸಿದ್ದಾರೆ. ಕೀನ್ಯದ ಹಿಲ್ಲೆನ್ ಒಬಿರಿ ಬೆಳ್ಳಿ ಹಾಗೂ ಇಥಿಯೋಪಿಯದ ಗುಡಾಫ್ ಸೆಗಾಯ್ ಕಂಚು ಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News