ಸೆಮಿ ಫೈನಲ್ ನಲ್ಲಿ ಸೋತು ಕಂಚಿನ ಪದಕ ಗೆದ್ದ ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್

Update: 2021-08-04 06:15 GMT

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ವೆಲ್ಟರ್ ವೇಟ್ (69ಕೆಜಿ)ವಿಭಾಗದ ಸೆಮಿ ಫೈನಲ್ ನಲ್ಲಿ ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಸೋಲನುಭವಿಸಿದರು. ಈ ಮೂಲಕ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಬುಧವಾರ ನಡೆದ ಅಂತಿಮ-4ರ ಸ್ಪರ್ಧೆಯಲ್ಲಿ ಅಸ್ಸಾಂ ಬಾಕ್ಸರ್ ಲವ್ಲೀನಾ ಅವರು ಟರ್ಕಿಯ ಬುಸೆನಾಝ್ ಸುರ್ಮೆನೆಲಿ ಅವರ ವಿರುದ್ಧದ ಮೊದಲ ಎರಡು ರೌಂಡ್ ಗಳನ್ನು ಸೋತರು. ಅಂತಿಮವಾಗಿ ಒಮ್ಮತದ ತೀರ್ಪಿನಲ್ಲಿ ಟರ್ಕಿಯ ಬಾಕ್ಸರ್ ವಿರುದ್ಧ 0-5  ಅಂತರದಿಂದ ಸೋತಿದ್ದಾರೆ.

ಲವ್ಲೀನಾ ಅವರು ಅಂತಿಮ -16ರ ಸುತ್ತಿನಲ್ಲಿ ಜರ್ಮನಿಯ ನದಿನ್ ಅಪೆಟ್ಜ್ ಅವರನ್ನು ಸೋಲಿಸಿ ಗಮನ ಸೆಳೆದಿದ್ದರು.  ಕ್ವಾರ್ಟರ್ ಫೈನಲ್ ನಲ್ಲಿ ಚೈನೀಸ್ ತೈಪೆಯ ನೀನ್ ಚಿನ್ ಚೆನ್ ಅವರನ್ನು 4-1ರಿಂದ ಸೋಲಿಸಿ ಸೆಮಿ ಫೈನಲ್ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News