ಲೆಬನಾನ್ ಮೇಲೆ ಇಸ್ರೇಲ್ ನಿಂದ ಫಿರಂಗಿ ದಾಳಿ

Update: 2021-08-04 15:36 GMT
photo : twitter/@soitiz

 ಜೆರುಸಲೇಂ, ಆ.4: ಲೆಬನಾನ್ ಕಡೆಯಿಂದ ಇಸ್ರೇಲ್ ಪ್ರದೇಶದತ್ತ ಮೂರು ಕ್ಷಿಪಣಿ ದಾಳಿ ನಡೆದಿರುವುದಕ್ಕೆ ಪ್ರತಿಯಾಗಿ ಲೆಬನಾನ್ ಮೇಲೆ ಫಿರಂಗಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.

ಲೆಬನಾನ್ ಉಡಾಯಿಸಿದ 3 ಕ್ಷಿಪಣಿಗಳಲ್ಲಿ ಒಂದು ನಮ್ಮ ಗಡಿಭಾಗದ ಹೊರಗೆ ಬಿದ್ದರೆ ಮತ್ತೊಂದು ಗಡಿಭಾಗದೊಳಗಿನ ಬಯಲು ಪ್ರದೇಶದಲ್ಲಿ ಸ್ಫೋಟಿಸಿದೆ. ಮೂರನೇ ಕ್ಷಿಪಣಿಯನ್ನು ಇಸ್ರೇಲ್ ಸೇನೆ ಮಧ್ಯದಲ್ಲೇ ಪ್ರತಿಬಂಧಿಸಿದೆ ಎಂದು ಇಸ್ರೇಲ್ ನ ಸರಕಾರಿ ಟಿವಿ ವಾಹಿನಿ ಚಾನೆಲ್ 12 ವರದಿ ಮಾಡಿದೆ. ಇಸ್ರೇಲ್ ನತ್ತ ಹಲವು ಕ್ಷಿಪಣಿ ಉಡಾಯಿಸಿರುವುದನ್ನು ಲೆಬನಾನ್ ನ ಪ್ರತ್ಯಕ್ಷದರ್ಶಿಗಳೂ ದೃಢಪಡಿಸಿದ್ದಾರೆ.

ಇಸ್ರೇಲ್ ನ ಕೆಲವು ನಗರಗಳಲ್ಲಿ ಕ್ಷಿಪಣಿ ದಾಳಿಯ ಮುನ್ನೆಚ್ಚರಿಕೆ ನೀಡುವ ಸೈರನ್ ಮೊಳಗಿಸಲಾಯಿತು. ಬಯಲು ಪ್ರದೇಶದಲ್ಲಿ ಕ್ಷಿಪಣಿ ಸ್ಫೋಟದಿಂದ ಕೆಲವು ಗಿಡಗಳಿಗೆ ಬೆಂಕಿ ಹತ್ತಿ ಉರಿಯುತ್ತಿರುವ ಚಿತ್ರವನ್ನು ಇಸ್ರೇಲ್ ನ ಸೇನೆ ಬಿಡುಗಡೆಗೊಳಿಸಿದ್ದು ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದಿದೆ. ಲೆಬನಾನ್ನಲ್ಲಿ ಯಾವುದೇ ಸಾವುನೋವಿನ ಬಗ್ಗೆ ವರದಿಯಾಗಿಲ್ಲ.

 ಕ್ಷಿಪಣಿ ದಾಳಿಯ ಬಳಿಕ ಇಸ್ರೇಲ್ ರಕ್ಷಣಾ ಸಚಿವ ಬೆನ್ನೀ ಗ್ರಾಂಟ್ಸ್ ಪ್ರಧಾನಿ ನಫ್ತಾಲಿ ಬೆನ್ನೆಟ್ ರನ್ನು ಭೇಟಿಯಾಗಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿರುವುದಾಗಿ ಸರಕಾರದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News