ಒಲಿಂಪಿಕ್ಸ್ ಪುರುಷರ ಹಾಕಿ:ಆಸ್ಟ್ರೇಲಿಯವನ್ನು ಶೂಟೌಟ್ ನಲ್ಲಿ ಸೋಲಿಸಿ ಮೊದಲ ಬಾರಿ ಚಿನ್ನ ಗೆದ್ದ ಬೆಲ್ಜಿಯಂ

Update: 2021-08-05 15:50 GMT

ಟೋಕಿಯೊ, ಆ.5: ಫೈನಲ್ ಪಂದ್ಯವು 1-1ರಿಂದ ಡ್ರಾನಲ್ಲಿ ಕೊನೆಗೊಂಡ ಕಾರಣ ಬೆಲ್ಜಿಯಂ ಪುರುಷರ ಹಾಕಿ ತಂಡ ಆಸ್ಟ್ರೇಲಿಯವನ್ನು ಶೂಟೌಟ್ ನಲ್ಲಿ 3-2 ಅಂತರದಿಂದ ಸೋಲಿಸಿ ಚೊಚ್ಚಲ ಒಲಿಂಪಿಕ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಉಭಯ ತಂಡಗಳು ಪಂದ್ಯದುದ್ದಕ್ಕೂ ನಿಕಟ ಪೈಪೋಟಿಯನ್ನು ನೀಡಿದ್ದು, ಬೆಲ್ಜಿಯಂ ತಂಡವು ಫಾರ್ವರ್ಡ್ ಫ್ಲೊರೆಂಟ್ ನೆರವಿನಿಂದ ಆರಂಭಿಕ ಮುನ್ನಡೆ ಪಡೆಯಿತು. ಆಸ್ಟ್ರೇಲಿಯವು ಟಾಮ್ ವಿಕ್ ಹ್ಯಾಮ್ ಗಳಿಸಿದ ಗೋಲು ನೆರವಿನಿಂದ ಸಮಬಲ ಸಾಧಿಸಿ ಪಂದ್ಯವನ್ನು ಶೂಟೌಟ್ ನತ್ತ ಕೊಂಡೊಯ್ದರು.

ಶೂಟೌಟ್  ಸುತ್ತಿನಲ್ಲಿ ಬೆಲ್ಜಿಯಂನ ಗೋಲ್ ಕೀಪರ್ ವಿನ್ಸೆಂಟ್ ಎದುರಾಳಿ ಆಸ್ಟ್ರೇಲಿಯದ ಪ್ರಯತ್ನವನ್ನು ವಿಫಲಗೊಳಿಸುವುದರೊಂದಿಗೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಆಸ್ಟ್ರೇಲಿಯವು ಬೆಳ್ಳಿ ಪದಕವನ್ನು ಜಯಿಸಿತು. 2004ರಲ್ಲಿ ಒಲಿಂಪಿಕ್ಸ್ ನಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯ ಪದಕ ಜಯಿಸಿತ್ತು. ಭಾರತವು ಜರ್ಮನಿ ವಿರುದ್ಧ ಜಯ ಸಾಧಿಸಿ ಕಂಚಿನಪದಕವನ್ನು ತನ್ನದಾಗಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News