×
Ad

ಕ್ಯಾಲಿಫೋರ್ನಿಯ: ಐತಿಹಾಸಿಕ ಪಟ್ಟಣವನ್ನು ಸುಟ್ಟು ಹಾಕಿದ ಕಾಡ್ಗಿಚ್ಚು‌

Update: 2021-08-06 21:48 IST

ಸ್ಯಾಕ್ರಮೆಂಟೊ (ಕ್ಯಾಲಿಫೋರ್ನಿಯ), ಆ. 6: ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ಸಣ್ಣ ಗುಡ್ಡಗಾಡು ಪಟ್ಟಣವೊಂದನ್ನು ಮೂರು ವಾರಗಳ ಹಿಂದೆ ಹೊತ್ತಿಕೊಂಡ ಕಾಡ್ಗಿಚ್ಚು ಆವರಿಸಿದೆ ಹಾಗೂ ಅಲ್ಲಿನ ಐತಿಹಾಸಿಕ ಕಟ್ಟಡಗಳನ್ನು ನಾಶಗೊಳಿಸಿದೆ. ಪಟ್ಟಣದ ಹೆಚ್ಚಿನ ಭಾಗ ಬೂದಿಯಾಗಿದೆ ಹಾಗೂ ಬಲವಾದ ಗಾಳಿಯಿಂದಾಗಿ ಹೊಸದಾಗಿ ಹುಟ್ಟಿಕೊಂಡ ಇನ್ನೊಂದು ಬೆಂಕಿಯು ಮನೆಗಳನ್ನು ಸುಟ್ಟು ಹಾಕಿದೆ.


ಒಣ ಮರಗಿಡಗಳು ಮತ್ತು ಗಂಟೆಗೆ 64 ಕಿ.ಮೀ. ವೇಗದ ಗಾಳಿಯಿಂದಾಗಿ ವೇಗವಾಗಿ ಹರಡುತ್ತಾ ಬೃಹತ್ ಸ್ವರೂಪವನ್ನು ಪಡೆದ ಕಾಡ್ಗಿಚ್ಚು ಗ್ರೀನ್ವಿಲ್ ಪಟ್ಟಣದ ಸಿಯಾರ ನೆವಾಡ ಪ್ರದೇಶವನ್ನು ಆಕ್ರಮಿಸಿದೆ. ಇಲ್ಲಿನ ಕೆಲವು ಕಟ್ಟಡಗಳು ನೂರು ವರ್ಷಗಳಿಗೂ ಹೆಚ್ಚು ಹಳೆಯದಾಗಿವೆ.

‘‘ಕಾಡ್ಗಿಚ್ಚು ನಮ್ಮ ಪಟ್ಟಣದ ಸಂಪೂರ್ಣ ಕೇಂದ್ರ ಭಾಗವನ್ನು ಸುಟ್ಟು ಹಾಕಿದೆ. ನಮ್ಮ ಐತಿಹಾಸಿಕ ಕಟ್ಟಡಗಳು, ಕೌಟುಂಬಿಕ ಮನೆಗಳು, ಸಣ್ಣ ಉದ್ಯಮಗಳು ಮತ್ತು ನಮ್ಮ ಮಕ್ಕಳ ಶಾಲೆಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ’’ ಎಂಬುದಾಗಿ ಪ್ಲೂಮಸ್ ಕೌಂಟಿ ಸೂಪರ್ವೈಸರ್ ಕೆವಿನ್ ಗಾಸ್ ಗುರುವಾರ ಫೇಸ್ಬುಕ್ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News