ಟೋಕಿಯೊ ಒಲಿಂಪಿಕ್ಸ್: ಕೂದಲೆಳೆ ಅಂತರದಿಂದ ಐತಿಹಾಸಿಕ ಪದಕ ವಂಚಿತರಾದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್

Update: 2021-08-07 05:47 GMT

ಟೋಕಿಯೊ: ಎರಡನೇ ಬಾರಿ  ಒಲಿಂಪಿಕ್ಸ್, ಕ್ರೀಡಾಕೂಟದಲ್ಲಿ ಸ್ಪರ್ಧಿಸಿರುವ ಕರ್ನಾಟಕದ  ಗಾಲ್ಫರ್ ಅದಿತಿ ಅಶೋಕ್ ಶನಿವಾರ ಕೂದಲೆಳೆ ಅಂತರದಿಂದ ಐತಿಹಾಸಿಕ ಪದಕದಿಂದ ವಂಚಿತರಾದರು. ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.

 ರಿಯೊ ಒಲಿಂಪಿಕ್ಸ್ ನಲ್ಲಿ 41 ನೇ ಸ್ಥಾನವನ್ನು ಗಳಿಸಿದ್ದ ಅದಿತಿ ಟೋಕಿಯೊ ಒಲಿಂಪಿಕ್ಸ್ ನಲ್ಲಿ  ಮೊದಲ ಮೂರು ಸುತ್ತುಗಳಲ್ಲಿ ಮೊದಲ ಮೂರು ಸ್ಥಾನ ಗಳಿಸಿ ಪದಕದ ರೇಸ್ ನಲ್ಲಿದ್ದರು, ಇದುವರೆಗೆ ಯಾವುದೇ ಭಾರತೀಯ ಗಾಲ್ಫರ್ ಈ ಸಾಧನೆ ಮಾಡಿರಲಿಲ್ಲ.

 ವಿಶ್ವ ನಂ .1 ಹಾಗೂ  LPGA ಚಾಂಪಿಯನ್  ನೆಲ್ಲಿ ಕೊರ್ಡಾ ಒಲಿಂಪಿಕ್ ಚಿನ್ನವನ್ನು ಗೆದ್ದುಕೊಂಡರು.

ಈ ಹಿಂದೆ ವೀರೊಚಿತ ಪ್ರದರ್ಶನ ನೀಡಿ ಪದಕದ ಭರವಸೆ ಮೂಡಿಸಿದ್ದ ಮಿಲ್ಖಾ ಸಿಂಗ್, ಪಿ.ಟಿ. ಉಷಾ, ಅಭಿನವ್ ಬಿಂದ್ರಾ, ದೀಪಾ ಕರ್ಮಾಕರ್ ಹಾಗೂ  ಜೋಯ್‌ದೀಪ್ ಕರ್ಮಾಕರ್ ಅವರು 4 ನೇ ಸ್ಥಾನದೊಂದಿಗೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು  ಕೊನೆಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News