ಪಶ್ಚಿಮ ಆಫ್ರಿಕದಲ್ಲಿ ಮಾರಕ ಮಾರ್ಬರ್ಗ್ ಸೋಂಕಿನ ಮೊದಲ ಪ್ರಕರಣ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆ

Update: 2021-08-10 16:43 GMT

ಜಿನೀವ (ಸ್ವಿಟ್ಸರ್ಲ್ಯಾಂಡ್), ಆ. 10: ಗಿನಿ ದೇಶದಲ್ಲಿ ಮಾರ್ಬರ್ಗ್ ಕಾಯಿಲೆಯ ಪ್ರಕರಣವೊಂದು ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಸೋಮವಾರ ತಿಳಿಸಿದೆ. ಎಬೋಲಾ ಕಾಯಿಲೆಯೊಂದಿಗೆ ಸಂಬಂಧ ಹೊಂದಿರುವ ಈ ಮಾರಕ ವೈರಸ್ ಪಶ್ಚಮಿ ಆಫ್ರಿಕದಲ್ಲಿ ಪತ್ತೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ. ಇದು ಕೋವಿಡ್-19 ವೈರಸ್ ನಂತೆ ಪ್ರಾಣಿಗಳಿಂದ ಮಾನವರಿಗೆ ಹರಡಿದೆ ಎಂದು ತಿಳಿದು ಬಂದಿದೆ.

ಈ ವೈರಸ್ ಬಾವಲಿಗಳಿಂದ ಹರಡುತ್ತದೆ ಹಾಗೂ ಅದು 88 ಶೇಕಡ ಸಾವಿನ ದರವನ್ನು ಹೊಂದಿದೆ. ಗಿನಿ ದೇಶದ ಗುಯೆಕೆಡೂ ರಾಜ್ಯದಲ್ಲಿ ಆಗಸ್ಟ್ 2ರಂದು ಮೃತಪಟ್ಟ ರೋಗಿಯೊಬ್ಬರಿಂದ ಪಡೆಯಲಾದ ಮಾದರಿಗಳಲ್ಲಿ ಈ ವೈರಸ್ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಗಿನಿಯಲ್ಲಿ ಕಳೆದ ವರ್ಷ ಎರಡನೇ ಬಾರಿಗೆ ಎಬೋಲಾ ಸ್ಫೋಟಗೊಂಡಿತ್ತು ಹಾಗೂ 12 ಜೀವಗಳನ್ನು ಬಲಿ ಪಡೆದುಕೊಂಡಿತ್ತು. ಆ ಸಾಂಕ್ರಾಮಿಕ ಮುಕ್ತಾಯಗೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ ಕೇವಲ ಎರಡು ತಿಂಗಳ ಬಳಿಕ ಈ ಮಾರಕ ವೈರಸ್ ಕಾಣಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News