×
Ad

ಭಾರತದ ವಿಮಾನಗಳ ಮೇಲಿನ ನಿಷೇಧ ಸೆಪ್ಟಂಬರ್ 21ರವರೆಗೆ ವಿಸ್ತರಣೆ: ಕೆನಡ

Update: 2021-08-10 22:14 IST

ಒಟ್ಟಾವ (ಕೆನಡ), ಆ. 9: ಭಾರತದಿಂದ ಬರುವ ಪ್ರಯಾಣಿಕ ವಿಮಾನಗಳ ಮೇಲಿನ ನಿಷೇಧವನ್ನು ಸೆಪ್ಟಂಬರ್ 21ರವರೆಗೆ ವಿಸ್ತರಿಸಲಾಗುವುದು ಎಂದು ದೇಶದ ಸಾರಿಗೆ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

‌ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕು ಪ್ರಕರಣಗಳು ಒಡ್ಡಿರುವ ಬೆದರಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.
ನಿಷೇಧವನ್ನು ಮೊದಲ ಬಾರಿಗೆ ಎಪ್ರಿಲ್ 22ರಂದು ವಿಧಿಸಲಾಗಿಗ್ತು. ಅಂದಿನಿಂದ ಅದನ್ನು ಹಲವು ಬಾರಿ ವಿಸ್ತರಿಸಲಾಗಿದೆ.

ಆದರೆ, ನಿಷೇಧವು ಸರಕು ವಿಮಾನಗಳು ಅಥವಾ ವೈದ್ಯಕೀಯ ಉದ್ದೇಶದ ಹಾರಾಟಗಳಿಗೆ ಅನ್ವಯಿಸುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News