ಮಹಿಳಾ ಸೈನಿಕರ ಕನ್ಯತ್ವ ಪರೀಕ್ಷೆಯನ್ನು ಕೊನೆಗೊಳಿಸಿದ ಇಂಡೋನೇಶ್ಯ ಸೇನೆ

Update: 2021-08-11 16:47 GMT
photo: twitter/@edrormba

ಜಕಾರ್ತ (ಇಂಡೋನೇಶ್ಯ), ಆ. 11: ಕ್ಯಾಡೆಟ್ಗಳಾಗಲು ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಕನ್ಯತ್ವ ಪರೀಕ್ಷೆಗಳನ್ನು ನಡೆಸುವ ವಿವಾದಾತ್ಮಕ ಪದ್ಧತಿಯನ್ನು ಇಂಡೋನೇಶ್ಯ ಸೇನೆ ಕೊನೆಗೊಳಿಸಿದೆ ಎಂದು ಸೇನೆಯ ಮುಖ್ಯಸ್ಥರು ಹೇಳಿದ್ದಾರೆ. ಈ ಪದ್ಧತಿಯ ವಿರುದ್ಧ ಸುದೀರ್ಘ ಕಾಲದಿಂದ ಹೋರಾಟ ನಡೆಸುತ್ತಾ ಬಂದಿರುವ ಮಾನವಹಕ್ಕು ಕಾರ್ಯಕರ್ತರು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ.

‘‘ಶೋಷಣಾತ್ಮಕ ಹಾಗೂ ಕ್ರೂರ ಎರಡು ಬೆರಳ ಪರೀಕ್ಷೆ’’ಯನ್ನು ವ್ಯವಸ್ಥಿತವಾಗಿ ನಡೆಸುತ್ತಾ ಬರಲಾಗಿದೆ’’ ಎಂದು ನ್ಯೂಯಾರ್ಕ್ನ ಮಾನವಹಕ್ಕುಗಳ ಸಂಘಟನೆ ಹ್ಯೂಮನ್ ರೈಟ್ಸ್ ವಾಚ್ (ಎಚ್ಆರ್ಡಬ್ಲ್ಯು) ಹೇಳಿದೆ. ಅದು ಈ ಪದ್ಧತಿಯ ಬಗ್ಗೆ 2014ರಲ್ಲಿ ತನಿಖೆ ನಡೆಸಿತು ಹಾಗೂ ಅದನ್ನು ಕೊನೆಗೊಳಿಸುವಂತೆ 2017ರಲ್ಲಿ ಮತ್ತೊಮ್ಮೆ ಕರೆ ನೀಡಿತು.
ಸೈನಿಕರ ನೈತಿಕತೆಯನ್ನು ನಿರ್ಧರಿಸಲು ಈ ಪರೀಕ್ಷೆಗಳು ಅಗತ್ಯ ಎಂಬುದಾಗಿ ಸೇನೆ ಹಿಂದೆ ಪ್ರತಿಪಾದಿಸಿತ್ತು. ಆದರೆ, ಈ ಪರೀಕ್ಷೆಗೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇಂಥ ಪರೀಕ್ಷೆಗಳು ಈಗ ಸೇನೆಯಲ್ಲಿ ನಡೆಯುತ್ತಿಲ್ಲ ಎಂದು ಇಂಡೋನೇಶ್ಯ ಸೇನಾ ಮುಖ್ಯಸ್ಥ ಅಂಡಿಕ ಪೆರ್ಕಾಸ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News