ಲಾರ್ಡ್ಸ್‌ನಲ್ಲಿ ಶತಕ ಸಿಡಿಸಿದ ಭಾರತದ 10ನೇ ಬ್ಯಾಟ್ಸ್ ಮನ್ ಕೆ.ಎಲ್.ರಾಹುಲ್

Update: 2021-08-13 16:46 GMT

ಲಂಡನ್, ಆ.13: ಭಾರತದ ಆರಂಭಿಕ ಬ್ಯಾಟ್ಸ್ ಮನ್ ಕೆ.ಎಲ್. ರಾಹುಲ್ ಅವರು ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ 129 ರನ್ ಗಳಿಸಿ ಔಟಾದರು.

ಪ್ರತಿಷ್ಠಿತ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಶತಕ ಗಳಿಸಿದ ಭಾರತೀಯರ ಆಯ್ದ ಗುಂಪಿಗೆ ರಾಹುಲ್ ಸೇರ್ಡಡೆಯಾದರು. ಆಶ್ಚರ್ಯಕರ ವಿಚಾರವೆಂದರೆ ಪಟ್ಟಿಯಲ್ಲಿ  ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಹೆಸರಿಲ್ಲ.

ಹತ್ತು ಭಾರತೀಯ ಬ್ಯಾಟ್ಸ್‌ಮನ್‌ಗಳು ಲಾರ್ಡ್ಸ್‌ನಲ್ಲಿ 12 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ದಿಲೀಪ್ ವೆಂಗ್‌ಸರ್ಕಾರ್ ಮೂರು ಬಾರಿ ಈ ಸಾಧನೆಯನ್ನು ಮಾಡಿದ್ದಾರೆ. ಪ್ರತಿಯೊಂದು ಶತಕವನ್ನು ಪ್ರತ್ಯೇಕ ಪ್ರವಾಸದಲ್ಲಿ ಸಿಡಿಸಿದ್ದರು.

ಲಾರ್ಡ್ಸ್‌ನಲ್ಲಿ ಟೆಸ್ಟ್ ಶತಕ ಗಳಿಸಿದ ಭಾರತದ ಬ್ಯಾಟ್ಸ್‌ಮನ್‌ಗಳು:

ವರ್ಷ              ಆಟಗಾರ                  ಸ್ಕೋರ್

1952              ವಿನೂ ಮಂಕಡ್             184

1979              ಗುಂಡಪ್ಪ ವಿಶ್ವನಾಥ್        113

1979              ದಿಲೀಪ್ ವೆಂಗ್ ಸರ್ಕಾರ್ 103

1982              ದಿಲೀಪ್ ವೆಂಗ್ ಸರ್ಕಾರ್ 157

1986              ದಿಲೀಪ್ ವೆಂಗ್ ಸರ್ಕಾರ್   126*

1990              ಮುಹಮ್ಮದ್ ಅಝರುದ್ದೀನ್  121

1990              ರವಿಶಾಸ್ತ್ರಿ                   100

1996              ಸೌರವ್ ಗಂಗುಲಿ            131

2002             ಅಜಿತ್ ಅಗರ್ಕರ್            109*

2011               ರಾಹುಲ್ ದ್ರಾವಿಡ್          103*

2014              ಅಜಿಂಕ್ಯ ರಹಾನೆ            103

2021              ಕೆ.ಎಲ್ ರಾಹುಲ್           129

*ಅಜೇಯವನ್ನು ಸೂಚಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News