ಝಾಂಬಿಯ: ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಮುನ್ನಡೆ‌

Update: 2021-08-14 15:38 GMT

ಲುಸಾಕ (ಝಾಂಬಿಯ), ಆ. 14: ಝಾಂಬಿಯದಲ್ಲಿ ನಡೆದ ಚುನಾವಣೆಯ ಆರಂಭಿಕ ಫಲಿತಾಂಶ ಹೊರಬಿದ್ದಿದ್ದು, ಪ್ರತಿಪಕ್ಷ ನಾಯಕ ಹಕೈಂಡೆ ಹಿಚಿಲೆಮ ಅಧ್ಯಕ್ಷ ಎಡ್ಗರ್ ಲುಂಗು ಅವರಿಗಿಂತ ಮುನ್ನಡೆ ಸಾಧಿಸಿದ್ದಾರೆ. ಚುನಾವಣಾ ಆಯೋಗವು ಶನಿವಾರ ಬೆಳಗ್ಗೆ ಮೊದಲ ಫಲಿತಾಂಶವನ್ನು ಪ್ರಕಟಿಸಿದೆ.


ಝಾಂಬಿಯ ಸಂಸತ್ತಿನ 156 ಸ್ಥಾನಗಳ ಪೈಕಿ 15ರ ಫಲಿತಾಂಶ ಬಂದಿದ್ದು, ಹಿಚಿಲೆಮ 1,71,604 ಮತಗಳನ್ನು ಪಡದರೆ, ಅಧ್ಯಕ್ಷ ಲುಂಗು 1,10,178 ಮತಗಳನ್ನು ಗಳಿಸಿದ್ದಾರೆ.
ಈ 15 ಕ್ಷೇತ್ರಗಳಲ್ಲಿ ಲುಂಗು ಅವರ ಭದ್ರಕೋಟೆಗಳೂ ಸೇರಿವೆ. ಅಂದರೆ 2016ರ ಚುನಾವಣೆಯಲ್ಲಿ ಸೋತ ಬಳಿಕ ಪ್ರತಿಪಕ್ಷ ನಾಯಕ ಹಿಚಿಲೆಮ ಭದ್ರವಾಗಿ ನೆಲೆಯೂರಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಅಧ್ಯಕ್ಷ ಲುಂಗು ಅವ್ಯವಹಾರ ನಡೆಸಿದ್ದಾರೆ ಎಂಬ ವ್ಯಾಪಕ ಆರೋಪಗಳು ಕೇಳಿಬಂದಿದ್ದು, ಹಿಚಿಲೆಮ ಕಡಿಮೆ ಅಂತರದಿಂದ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News