ಇಂಗ್ಲೆಂಡ್‌ ವಿರುದ್ಧದ ಪಂದ್ಯಾಟದ ಮಧ್ಯೆ ಭಾರತ ತಂಡದ ಸಮವಸ್ತ್ರ ಧರಿಸಿ ಮೈದಾನಕ್ಕಿಳಿದ ಆಗಂತುಕ ʼಜಾರ್ವೊʼ

Update: 2021-08-14 18:07 GMT
Photo: Twitter

ಲಾರ್ಡ್ಸ್:‌ ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ನಡುವೆ ಟೆಸ್ಟ್‌ ಪಂದ್ಯಾಟ ನಡೆಯುತ್ತಿದೆ. ಪಂದ್ಯಾಟದ ನಡುವೆಯೇ ಆಗಂತುಕನೋರ್ವನ ಮಧ್ಯಪ್ರವೇಶದ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಜಾರ್ವೊ 69 ಎಂಬ ಹೆಸರಿನ ವ್ಯಕ್ತಿಯೋರ್ವ ಪಂದ್ಯಾಟದ ಮಧ್ಯೆಯೇ ಭಾರತದ ಸಮವಸ್ತ್ರ ಧರಿಸಿ ಮೈದಾನಕ್ಕಿಳಿದಿದ್ದ. ಈ ವೇಳೆ ಭಾರತ ತಂಡ ಫೀಲ್ಡಿಂಗ್‌ ನಲ್ಲಿತ್ತು. ಅಲ್ಲಿನ ಸೆಕ್ಯೂರಿಟಿಗಳು ಕೂಡಾ ಈತನನ್ನು ಗುರುತಿಸದೇ ಯಾಮಾರಿದ್ದರು ಎನ್ನಲಾಗಿದೆ. ಕೊನೆಗೆ ಭದ್ರತಾ ತಂಡ ಆಗಮಿಸಿ ಆತನನ್ನು ಮೈದಾನದಿಂದ ಕರೆದೊಯ್ಯಿತು. ಈ ಹಾಸ್ಯ ಪ್ರಸಂಗವು ಕೆಲ ಸಮಯ ಪ್ರೇಕ್ಷಕರನ್ನು ಹಾಗೂ ಆಟಗಾರರನ್ನು ನಗೆಗಡಲಿನಲ್ಲಿ ತೇಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News