×
Ad

"ಮೋದಿ ರಾಜೀನಾಮೆ ನೀಡಿ": ಲಂಡನ್‌ ನ ವೆಸ್ಟ್‌ ಮಿನ್ ಸ್ಟರ್‌ ಬ್ರಿಡ್ಜ್‌ ನಲ್ಲಿ ಸ್ವಾತಂತ್ರ್ಯೋತ್ಸವದ ಬ್ಯಾನರ್‌ !

Update: 2021-08-15 20:56 IST
ಕೃಪೆ: SOUTH ASIA SOLIDARITY GROUP

ಲಂಡನ್:‌ ಆಗಸ್ಟ್‌ 15ರಂದು ಭಾರತದ ಸ್ವಾತಂತ್ರ್ಯ ದಿನೋತ್ಸವವನ್ನು ಹಲವಾರು ದೇಶಗಳಲ್ಲಿ ಆಚರಿಸಲಾಗುತ್ತಿದೆ. ಆದರೆ ಲಂಡನ್‌ ನಲ್ಲಿನ ಭಾರತೀಯರು ವಿಭಿನ್ನವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದು, ಮುಂಜಾನೆಯಾಗುತ್ತಿದ್ದಂತೆಯೇ ಲಂಡನ್‌ ನ ವೆಸ್ಟ್‌ ಮಿನ್ ಸ್ಟರ್‌ ಸೇತುವೆಯಲ್ಲಿ ʼಮೋದಿ ರಾಜೀನಾಮೆ ನೀಡಿ (ರಿಸೈನ್‌ ಮೋದಿ) ಎಂದು ಬರೆದಿರುವ ಬ್ಯಾನರ್‌ ಅನ್ನು ಇಳಿಬಿಟ್ಟಿದ್ದಾರೆ.

ಮೋದಿಯ ಆಡಳಿತದಲ್ಲಿ ಭಾದಿತರಾದವರನ್ನು ನೆನಪಿಸುವ ಸಲುವಾಗಿ ಭಾರತೀಯ ಹೈಕಮಿಶನ್‌ ನ ಹೊರಗಡೆ ಹಲವು ಭಾರತೀಯರು ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಮೋಂಬತ್ತಿ ಹೊತ್ತಿಸಿದರು.

ಸಂಘಟಕರಲ್ಲೊಬ್ಬರಾದ ದಕ್ಷಿಣ ಏಷ್ಯಾ ಸಾಲಿಡಾರಿಟಿ ಗ್ರೂಪ್‌ ನ ಮುಕ್ತಿ ಶಾ "ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ, ದೇಶದ ಜಾತ್ಯತೀತ ಸಂವಿಧಾನವು ಬಿರುಕು ಬಿಟ್ಟಿದೆ. ಕೋಮು ಮತ್ತು ಜಾತಿ ಹಿಂಸೆ ಭಾರತ ಭೂಮಿಯನ್ನು ಹಿಂಬಾಲಿಸುತ್ತಿದೆ. ಸಾವಿರಾರು ರಾಜಕೀಯ ಕೈದಿಗಳು ಕೋವಿಡ್ ಸೋಂಕಿತರಾಗಿದ್ದುಕೊಂಡು ಕಾರಾಗೃಹಗಳಲ್ಲಿ ನರಳುತ್ತಿದ್ದಾರೆ ಮತ್ತು ಕೊರೋನ ವೈರಸ್ ಬಿಕ್ಕಟ್ಟಿನ ನಿರ್ಲಕ್ಷ್ಯ ಮತ್ತು ದುರಾಡಳಿತದ ಪರಿಣಾಮವಾಗಿ ಲಕ್ಷಾಂತರ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಈ ಕಾರಣದಿಂದಾಗಿ ಈ ಹಿಂಸೆ, ಅನ್ಯಾಯ ಮತ್ತು ಕ್ರಿಮಿನಲ್ ನಿರ್ಲಕ್ಷ್ಯದ ಮುಖ್ಯ ರೂವಾರಿ ನರೇಂದ್ರ ಮೋದಿಯವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದೇವೆ" ಎಂದು ಹೇಳಿದ್ದಾಗಿ caravanmagazine.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News