ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ರಶೀದ್ ಖಾನ್ ಚಿಂತಿತರಾಗಿದ್ದಾರೆ: ಪೀಟರ್ಸನ್
Update: 2021-08-16 21:18 IST
ಲಂಡನ್: ತನ್ನ ತಾಯ್ನಾಡು ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಸ್ಪಿನ್ನರ್ ರಶೀದ್ ಖಾನ್ ಚಿಂತಿತರಾಗಿದ್ದಾರೆ ಹಾಗೂ ಅವರ ಕುಟುಂಬವನ್ನು ದೇಶದಿಂದ ಹೊರ ತರಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಇಂಗ್ಲೆಂಡ್ ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದಾಗಿ ಕಾಬೂಲ್‌ನ ಹಮೀದ್ ಕರ್ಝೈ ಇಂಟರ್‌ನ್ಯಾಷನಲ್ (ಎಚ್‌ಕೆಐ) ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳು ಸ್ಥಗಿತಗೊಂಡಿದೆ. ರಶೀದ್ ಪ್ರಸ್ತುತ ಇಂಗ್ಲೆಂಡ್ ನಲ್ಲಿದ್ದು, ಹಂಡ್ರೆಡ್‌ನ ಮೊದಲ ಆವೃತ್ತಿಯಲ್ಲಿ ಟ್ರೆಂಟ್ ರಾಕೆಟ್ಸ್‌ಗಾಗಿ ಆಡುತ್ತಿದ್ದಾರೆ.
"ಮನೆಯಲ್ಲಿ ಬಹಳಷ್ಟು ಸಂಗತಿಗಳು ನಡೆಯುತ್ತಿವೆ. ನಾವು ಈ ಕುರಿತಾಗಿ ಸುದೀರ್ಘವಾಗಿ ಹರಟೆ ಹೊಡೆಯುತ್ತಿದ್ದೆವು ಅವರಿಗೆ ತಮ್ಮ ಕುಟುಂಬವನ್ನು ಅಫ್ಘಾನಿಸ್ತಾನದಿಂದ ಹೊರ ತರಲು ಸಾಧ್ಯವಾಗುತ್ತಿಲ್ಲ. ಅವರ ಜೀವನದಲ್ಲಿಸಾಕಷ್ಟು ಸಂಗತಿಗಳು ನಡೆದಿದೆ ಎಂದು ಪೀಟರ್ಸನ್ Sky Sports ಗೆ ತಿಳಿಸಿದರು.