×
Ad

ಅಮೆರಿಕದ ಸರಕು ಸಾಗಣೆ ವಿಮಾನದಲ್ಲಿ 600 ಕ್ಕೂ ಹೆಚ್ಚು ಅಫ್ಘಾನ್ ನಾಗರಿಕರು ಖತರ್ ಗೆ ಪ್ರಯಾಣ: ಫೋಟೊ ವೈರಲ್

Update: 2021-08-17 15:17 IST

 ಹೊಸದಿಲ್ಲಿ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸೋಮವಾರ  ಸಾವಿರಾರು ಅಫ್ಘನ್ನರು ಅಮೆರಿಕದ ವಾಯುಪಡೆಯ ವಿಮಾನವನ್ನು ಏರಲು ಅದರ ಹಿಂದೆ ಓಡುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. 600 ಕ್ಕೂ ಹೆಚ್ಚು ಅಫ್ಘಾನ್ ನಾಗರಿಕರು ಕೊನೆಯ ಕ್ಷಣದಲ್ಲಿ ಅಮೆರಿಕದ ಏರ್ ಫೋರ್ಸ್ ನ  ಸರಕು ಸಾಗಣೆ ವಿಮಾನದಲ್ಲಿ ಖತರ್ ಗೆ ಪ್ರಯಾಣಿಸಿದ್ದಾರೆ.

ಅಮೆರಿಕದ ವಾಯುಪಡೆಯ ಸಿ -17 ಗ್ಲೋಬ್‌ಮಾಸ್ಟರ್ III ರ ಸರಕು ಸಾಗಣೆ ವಿಮಾನದ ದೊಳಗೆ  ನೂರಾರು ಭಯಭೀತರಾದ ಅಫ್ಘಾನಿಯರು ಕುಳಿತಿರುವ ಆಘಾತಕಾರಿ ಫೋಟೊಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಮಹಿಳೆಯರು ಹಾಗೂ  ಮಕ್ಕಳು ಸೇರಿದಂತೆ ಎಲ್ಲರೂ ಯಾವುದೇ ಸಾಮಾನುಗಳನ್ನು ಹೊತ್ತುಕೊಂಡಂತೆ ಕಾಣುತ್ತಿಲ್ಲ, ತಾಲಿಬಾನ್‌ ಹಿಡಿತದಿಂದ ಪಲಾಯನ ಮಾಡುವಾಗ ಅವರು ತಮ್ಮ ಎಲ್ಲಾ ವಸ್ತುಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಇದು ಸೂಚಿಸುತ್ತದೆ.

ನ್ಯೂಸ್ ವೆಬ್‌ಸೈಟ್ ಡಿಫೆನ್ಸ್  ಒನ್ ಪ್ರಕಾರ, ಸರಕು ಸಾರಿಗೆ ವಿಮಾನವು ಒಟ್ಟು 640 ಅಫ್ಘಾನಿಸ್ತಾನಿಗಳನ್ನು ಹೊತ್ತೊಯ್ದಿದೆ. ಈ ವಿಮಾನವು  ಖತರ್ ಗೆ ತೆರಳಿದ್ದು, ಅಲ್ಲಿ ಅಫ್ಘನ್ನರು ಇಳಿದರು ಎಂದು ವೆಬ್‌ಸೈಟ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News