×
Ad

ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ದೇವಸ್ಥಾನ ನಿರ್ಮಿಸಿದ ಬಿಜೆಪಿ ಕಾರ್ಯಕರ್ತ

Update: 2021-08-17 22:23 IST
Credit: PTI Photo

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿದ ಪ್ರಧಾನಿಗೆ ಗೌರವವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೇವಸ್ಥಾನವನ್ನು ನಿರ್ಮಿಸಿದ್ದಾರೆ.

ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ  37 ವರ್ಷದ ಮಯೂರ್ ಮುಂಡೆ ಪುಣೆಯ ಔಂದ್ ಪ್ರದೇಶದಲ್ಲಿ ದೇವಸ್ಥಾನವನ್ನು ನಿರ್ಮಿಸಿದ್ದಾರೆ.

"ಪ್ರಧಾನಿಯಾದ ನಂತರ ಪಿಎಂ ಮೋದಿ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವುದು, ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುವುದು ಹಾಗೂ  ತ್ರಿವಳಿ ತಲಾಖ್ ಅನ್ನು ಯಶಸ್ವಿಯಾಗಿ ರದ್ದುಗೊಳಿಸುವುದು ಮುಂತಾದ ಸಮಸ್ಯೆಗಳನ್ನು ನಿಭಾಯಿಸಿದ್ದಾರೆ" ಎಂದು ಮುಂಡೆ ಹೇಳಿದರು.

"ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಿದ ವ್ಯಕ್ತಿಗೆ ದೇಗುಲ ಇರಬೇಕು ಎಂದು ನಾನು ಭಾವಿಸಿದ್ದೆ. ಹಾಗಾಗಿ, ನನ್ನ ಸ್ವಂತ ಜಾಗದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲು ನಾನು ನಿರ್ಧರಿಸಿದ್ದೇನೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಪ್ರಧಾನಿ ಪ್ರತಿಮೆ ಹಾಗೂ ದೇವಸ್ಥಾನದಲ್ಲಿ ಬಳಸಿದ ಕೆಂಪು ಅಮೃತಶಿಲೆಯನ್ನು ಜೈಪುರದಿಂದ ತರಲಾಗಿದೆ ಹಾಗೂ ಇದರ ಬೆಲೆ ರೂ.1.6 ಲಕ್ಷ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News