ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆ: ಮಿಝೋರಾಂ ನಾಗರಿಕರ ಮೇಲೆ ಅಸ್ಸಾಂ ಪೊಲೀಸರಿಂದ ಗುಂಡಿನ ದಾಳಿ

Update: 2021-08-17 17:27 GMT

ಐಜ್ವಾಲ್,ಆ.17: ಅಸ್ಸಾಂ ಪೊಲೀಸರು ಮಂಗಳವಾರ ನೆರೆಯ ಮಿಝೋರಾಮ್ ರಾಜ್ಯದ ನಾಗರಿಕರ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದು,ಉಭಯ ರಾಜ್ಯಗಳ ನಡುವಿನ ಗಡಿಯಲ್ಲಿ ಉದ್ವಿಗ್ನತೆ ಮತ್ತೆ ಹೆಚ್ಚಿದೆ. ಗುಂಡಿನ ದಾಳಿಯಿಂದ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ.

ಮೂರು ವಾರಗಳ ಹಿಂದೆ ಉಭಯ ರಾಜ್ಯಗಳ ಪೊಲೀಸ್ ಪಡೆಗಳ ನಡುವೆ ನಡೆದಿದ್ದ ಹಿಂಸಾತ್ಮಕ ಘರ್ಷಣೆಯಲ್ಲಿ ಏಳು ಪೊಲೀಸರು ಮೃತಪಟ್ಟಿದ್ದು,50ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಉಭಯ ರಾಜ್ಯಗಳ ನಡುವೆ ಶಾಂತಿ ಪ್ರಯತ್ನಗಳು ನಡೆಯುತ್ತಿರುವಾಗಲೇ ಮಂಗಳವಾರದ ಘಟನೆ ನಡೆದಿದೆ.

ಮಂಗಳವಾರ ಬೆಳಗಿನ ಜಾವ ಎರಡು ಗಂಟೆಯ ಸುಮಾರಿಗೆ ವೈರೆಂಗ್ಟೆ ಪಟ್ಟಣದ ಮೂವರು ಅಸ್ಸಾಮಿನ ಬಿಲಾಯಿಪುರ ನಿವಾಸಿಯಾಗಿರುವ ತಮ್ಮ ಸ್ನೇಹಿತನ ಆಹ್ವಾನದ ಮೇರೆಗೆ ಆತನಿಂದ ಮಾಂಸವನ್ನು ಪಡೆಯಲು ತೆರಳುತ್ತಿದ್ದಾಗ ಅಸ್ಸಾಮಿನ ಹೈಲಾಕಂಡಿ ಜಿಲ್ಲೆಗೆ ಹೊಂದಿಕೊಂಡಿರುವ ವಿವಾದಿತ ಐತ್ಲಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಕೊಲಾಸಿಬ್ ಜಿಲ್ಲಾಧಿಕಾರಿ ಎಚ್.ಲಾಲ್ತಂಗ್ಲಿಯಾನಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News