ಮ್ಯಾನ್ಮಾರ್: ಸೇನಾಕ್ರಾಂತಿಯ ನಂತರ ಸುಮಾರು 1 ಸಾವಿರ ಪ್ರಜೆಗಳ ಹತ್ಯೆ

Update: 2021-08-18 17:48 GMT

ಯಾಂಗಾನ್(ರಂಗೂನ್), ಆ.18: ಮ್ಯಾನ್ಮಾರ್‌ನಲ್ಲಿ ಫೆಬ್ರವರಿ 1ರಂದು ನಡೆದ ಸೇನಾಕ್ರಾಂತಿಯ ನಂತರ ಸುಮಾರು 1 ಸಾವಿರ ಪ್ರಜೆಗಳ ಹತ್ಯೆಯಾಗಿದೆ ಎಂದು ‘ ಅಸಿಸ್ಟೆನ್ಸ್ ಅಸೋಸಿಯೇಷನ್ ಫಾರ್ ಪೊಲಿಟಿಕಲ್ ಪ್ರಿಸನರ್ಸ್(ಎಎಪಿಪಿ) ಸಂಘಟನೆ ಹೇಳಿದೆ.

ಎಎಪಿಪಿ ದಾಖಲೆಗಳ ಪ್ರಕಾರ, 1001 ಅಮಾಯಕ ಜನರ ಹತ್ಯೆಯಾಗಿದೆ ಎಂದು ಸಂಘಟನೆಯ ಕಾರ್ಯದರ್ಶಿ ಟೇಟ್ ನೈಂಗ್ ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ. ದೇಶಗಳ ಭದ್ರತಾ ಪಡೆಯಿಂದ ಹತ್ಯೆಗೊಳಗಾದವರ ದಾಖಲೆ ಸಂಗ್ರಹಿಸುವ ಕಾರ್ಯಕರ್ತರ ತಂಡವಾಗಿದೆ ಎಎಪಿಪಿ. ಚುನಾಯಿತ ಸರಕಾರವನ್ನು ಮ್ಯಾನ್ಮಾರ್ ಸೇನೆ ಫೆಬ್ರವರಿ 1ರಂದು ಕ್ಷಿಪ್ರ ಕ್ರಾಂತಿಯ ಮೂಲಕ ಕಿತ್ತೊಗೆದಿತ್ತು. ಬಳಿಕ ಅಲ್ಲಿ ಸೇನಾಡಳಿತವನ್ನು ವಿರೋಧಿಸಿ ನಿರಂತರ ಪ್ರತಿಭಟನೆ , ವ್ಯಾಪಕ ಹರತಾಳ ಮುಂದುವರಿದಿದ್ದು ಅರ್ಥವ್ಯವಸ್ಥೆಯ ಮೇಲೆ ತೀವ್ರ ಹಾನಿಯಾಗಿದೆ.

ಆದರೆ ತಾನು ಸಂವಿಧಾನದ ಪ್ರಕಾರವೇ ಅಧಿಕಾರ ಕೈವಶ ಮಾಡಿಕೊಂಡಿದ್ದು ಇದು ಸೇನಾ ದಂಗೆಯಲ್ಲ ಎಂದು ಸೇನಾಡಳಿತ ವಾದಿಸುತ್ತಿದೆ. 2017ರಲ್ಲಿ ರೊಹಿಂಗ್ಯಾ ಅಲ್ಪಸಂಖ್ಯಾತರ ವಿರುದ್ಧ ನಡೆಸಿದ ಅಮಾನುಷ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಮ್ಯಾನ್ಮಾರ್‌ನ ಸೇನೆಯ ವಿರುದ್ಧ ವಿಚಾರಣೆ ನಡೆಯುತ್ತಿದೆ . ಆದರೆ ಎಎಪಿಪಿ ಅತಿರಂಜಿತ ಅಂಕಿಅಂಶ ನೀಡುತ್ತಿದೆ . ಹಲವು ಯೋಧರೂ ಸಾವನ್ನಪ್ಪಿದ್ದು ಈ ಅಂಕಿಅಂಶವನ್ನು ಎಎಪಿಪಿ ತನ್ನ ದಾಖಲೆಯಲ್ಲಿ ಸೇರಿಸಿಲ್ಲ ಎಂದು ಈ ಹಿಂದೆ ಮ್ಯಾನ್ಮಾರ್‌ನ ಸೇನಾಧಿಕಾರಿಗಳು ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News