ಮೆಕ್ಸಿಕೋ: ರೇಡಿಯೊ ಪತ್ರಕರ್ತನ ಗುಂಡಿಕ್ಕಿ ಹತ್ಯೆ
Update: 2021-08-21 22:49 IST
ಮೆಕ್ಸಿಕೊ ಸಿಟಿ, ಆ.21: ಮೆಕ್ಸಿಕೋದ ಕರಾವಳಿ ಪ್ರಾಂತ್ಯದ ನಗರ ವೆರಕ್ರೂಝ್ನಲ್ಲಿ ರೇಡಿಯೊ ಪತ್ರಕರ್ತ ಜೆಸಿಂತೊ ರೊಮೆರೊ ಫ್ರೋರ್ಸ್ ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ದೇಶದ ಭದ್ರತಾ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.
ಇವರು ಒರಿ ಸ್ಟೀರಿಯೊ 99.3 ಎಫ್ಎಂ ರೇಡಿಯೋದಲ್ಲಿ ಕೆಲಸ ಮಾಡುತ್ತಿದ್ದರು . ಕೆಲ ದಿನಗಳ ಹಿಂದೆ ಇವರಿಗೆ ಕೊಲೆ ಬೆದರಿಕೆ ಬಂದಿತ್ತು ಎಂದು ಅವರ ನಿಕಟವರ್ತಿಗಳು ಹೇಳಿರುವುದಾಗಿ ವರದಿಯಾಗಿದೆ.
ಕಾನೂನನ್ನು ಕೈಗೆತ್ತಿಕೊಳ್ಳಲು ಮತ್ತು ಪ್ರಜೆಗಳನ್ನು ಬೆದರಿಸಲು ಯಾರಿಗೂ ಅವಕಾಶವಿಲ್ಲ. ಈ ದುಷ್ಕತ್ಯದ ಹಿಂದಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಭದ್ರತಾ ಸಂಸ್ಥೆಯ ಮುಖ್ಯಸ್ಥ ಹ್ಯೂಗೊ ಮಲ್ದೊನಾಡೊ ಹೇಳಿದ್ದಾರೆ.