ಕೋವಿಡ್‌ ನಿಂದ ನಿಮ್ಮನ್ನು ನೀವೇ ಸುರಕ್ಷಿತರಾಗಿರಿಸಿಕೊಳ್ಳಿ, ಸರಕಾರ ಮಾರಾಟದಲ್ಲಿ ಬ್ಯುಝಿಯಾಗಿದೆ: ರಾಹುಲ್‌ ಗಾಂಧಿ

Update: 2021-08-26 07:02 GMT

ಹೊಸದಿಲ್ಲಿ: ನಿಧಾನಗತಿಯ ಲಸಿಕೀಕರಣ, ಆತಂಕಕಾರಿ ಕೋವಿಡ್‌ ಪರಿಸ್ಥಿತಿ ಮತ್ತು ಈ ವಾರದ ಆರಂಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ರವರು ಘೋಷಿಸಿದ ರಾಷ್ಟ್ರೀಯ ಸ್ವತ್ತುಗಳ ಮಾರಾಟದ ಕುರಿತು ಒಂದೇ ಟ್ವೀಟ್‌ ನಲ್ಲಿ ರಾಹುಲ್‌ ಗಾಂಧಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ತಮ್ಮ ಖಾತೆಯಲ್ಲಿ ಟ್ವೀಟ್‌ ಮಾಡಿದ ರಾಹುಲ್‌ ಗಾಂಧಿ "ಹೆಚ್ಚುತ್ತಿರುವ ಕೋವಿಡ್‌ ಸಂಖ್ಯೆಗಳು ಆತಂಕಕಾರಿಯಾಗಿವೆ. ಮುಂದಿನ ಅಲೆಯಲ್ಲಿ ಹೆಚ್ಚಿನ ಪರಿಣಾಮಗಳನ್ನು ಇಲ್ಲವಾಗಿಸುವ ಕಾರಣದಿಂದ ಲಸಿಕೀಕರಣ ಶೀಘ್ರಗತಿಯಲ್ಲಿ ಸಾಗಬೇಕಿದೆ. ನಿಮ್ಮನ್ನು ನೀವೇ ಸುರಕ್ಷಿತವಾಗಿರಿಸಿಕೊಳ್ಳಿ. ಏಕೆಂದರೆ ಭಾರತ ಸರಕಾರ ಮಾರಾಟದಲ್ಲಿ ವ್ಯಸ್ತವಾಗಿದೆ" ಎಂದು ಹೇಳಿಕೆ ನೀಡಿದ್ದಾರೆ.

ಕೋವಿಡ್‌ ನಿರ್ವಹಣೆಯ ಕುರಿತು ಸರಕಾರದ ಕೆಲ ಅಂಶಗಳು, ರಾಷ್ಟ್ರೀಯ ಲಸಿಕೀಕರಣ ಕಾರ್ಯಕ್ರಮದಲ್ಲಿನ ಡೋಸ್‌ ಗಳ ಕೊರತೆ, ಲಸಿಕೆ ದರ, ದೇಶದ ಆರ್ಥಿಕತೆಯ ಮೇಲೆ ಕೋವಿಡ್‌ ನಿಂದಾದ ಪರಿಣಾಮ ಮುಂತಾದ ವಿಚಾರಗಳ ಕುರಿತಾದಂತೆ ಸರಕಾರವನ್ನು ರಾಹುಲ್‌ ಗಾಂಧಿ ಟೀಕಿಸುತ್ತಲೇ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News