ಗೂಗಲ್ ಅನುವಾದದ ಎಡವಟ್ಟು: ಪತ್ರಕರ್ತನ ಮೇಲೆ ತಾಲಿಬಾನಿಗಳ 'ಹಲ್ಲೆʼಯನ್ನು 'ಕೊಲೆʼಯಾಗಿಸಿದ ಮಾಧ್ಯಮಗಳು !

Update: 2021-08-26 13:32 GMT
photo : twitter.com/TOLOnews

ಹೊಸದಿಲ್ಲಿ: ಟೋಲೋ ನ್ಯೂಸ್ ಪತ್ರಕರ್ತರೊಬ್ಬರನ್ನು ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳು ಹತ್ಯೆಗೈದಿದ್ದಾರೆಂಬ ಸುದ್ದಿಯನ್ನು ಇಂದು ಹಲವಾರು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಈ ಸುದ್ದಿಯ ಮೂಲ ಟೊಲೋ ನ್ಯೂಸ್ ಆಗಿತ್ತು. ಈ ಸುದ್ದಿ ಸಂಸ್ಥೆ ಪರ್ಷಿಯನ್ ಭಾಷೆಯಲ್ಲಿ ಬರೆದಿದ್ದ ಶೀರ್ಷಿಕೆಯನ್ನು  ಗೂಗಲ್ ಟ್ರಾನ್ಸ್ ಲೇಟ್ ಮೂಲಕ ಅನುವಾದಿಸಿದಾಗ "ಟೋಲೋ ನ್ಯೂಸ್ ವರದಿಗಾರನನ್ನು ಕಾಬುಲ್‍ನಲ್ಲಿ ತಾಲಿಬಾನಿಗಳು ಹತ್ಯೆಗೈದಿದ್ದಾರೆ." ಎಂದು ಕಂಡುಬಂದಿದೆ. ಆದರೆ ಈ ವರದಿಯ ಲಿಂಕ್ ಒತ್ತಿದಾಗ ಟೋಲೋ ನ್ಯೂಸ್ ವರದಿಗಾರ ಝಿಯಾರ್ ಯಾದ್ ಎಂಬವರು ವರದಿಗಾರಿಕೆಗೆ ತೆರಳಿದಾಗ ತಾಲಿಬಾನಿಗಳಿಂದ ಹಲ್ಲೆಗೊಳಗಾಗಿದ್ದಾರೆಂದು ತಿಳಿಸುತ್ತದೆಯಲ್ಲದೆ ಪತ್ರಕರ್ತನ ಸಾವಿನ ಕುರಿತು ಎಲ್ಲಿಯೂ ಉಲ್ಲೇಖವಿಲ್ಲ.

ಗೂಗಲ್ ಅನುವಾದಕ ಸರಿಯಾಗಿಲ್ಲ ಎಂದು ಟ್ವಿಟ್ಟರಿಗೊಬ್ಬರು ಎತ್ತಿ ತೋರಿಸಿ ಸರಿಯಾದ ಅನುವಾದವನ್ನು ಬರೆದಿದ್ದರೂ ಹೆಚ್ಚಿನ ಸುದ್ದಿ ಸಂಸ್ಥೆಗಳು ಅದನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.

ಪತ್ರಕರ್ತ ಝಿಯಾರ್ ಖಾನ್ ಯಾದ್ ಅವರೇ ಟ್ವೀಟ್ ಮಾಡಿ ತನ್ನ ಮೇಲೆ ಹಲ್ಲೆಗೈಯ್ಯಲಾಗಿದೆ, ತನ್ನ ಸಾವಿನ ಸುದ್ದಿ ಸುಳ್ಳು ಎಂದು ಬರೆದಿದ್ದಾರೆ. "ಕಾಬುಲ್‍ನ ನ್ಯೂ ಸಿಟಿಯಲ್ಲಿ ತಾಲಿಬಾನಿಗಳಿಂದ ಹಲ್ಲೆಗೊಳಗಾಗಿದ್ದೇನೆ. ಕ್ಯಾಮರಾಗಳು, ನನ್ನ ಮೊಬೈಲ್ ಫೋನ್ ಅನ್ನೂ ಸೆಳೆದುಕೊಂಡಿದ್ದಾರೆ, ಕೆಲ ಜನರು ನನ್ನ ಸಾವಿನ ಸುದ್ದಿ ಹರಡಿದ್ದಾರೆ, ಇದು ಸುಳ್ಳು., ತಾಲಿಬಾನಿಗಳು ಶಸ್ತ್ರಸಜ್ಜಿತ ಲ್ಯಾಂಡ್ ಕ್ರೂಸರ್ ವಾಹನದಿಂದ ಇಳಿದು ಬಂದೂಕಿನಿಂದ ಬೆದರಿಸಿ ಹಲ್ಲೆಗೈದಿದ್ದಾರೆ," ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News