×
Ad

ಕರಾಚಿ: ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಕನಿಷ್ಟ 15 ಕಾರ್ಮಿಕರ ಮೃತ್ಯು

Update: 2021-08-27 22:38 IST

ಕರಾಚಿ, ಆ.27: ಪಾಕಿಸ್ತಾನದ ಕರಾಚಿ ಬಳಿಯ ಮೆಹ್ರಾನ್ ನಗರದ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಟ 15 ಕಾರ್ಮಿಕರು ಮೃತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫ್ಯಾಕ್ಟರಿಯ ಆವರಣದಲ್ಲಿ ಸುಮಾರು 20 ಕಾರ್ಮಿಕರಿದ್ದರು. ಆ ಸಂದರ್ಭ ಅಲ್ಲಿ ದಾಸ್ತಾನಿರಿಸಿದ್ದ ರಾಸಾಯನಿಕ ವಸ್ತುಗೆ ಬೆಂಕಿ ಹತ್ತಿದ್ದು ತ್ವರಿತವಾಗಿ ಹರಡಿದೆ. ಬೆಂಕಿಯ ಜ್ವಾಲೆಯಿಂದ ಫ್ಯಾಕ್ಟರಿಯ ಒಂದು ಭಾಗದ ಗೋಡೆ ಕುಸಿದಿದೆ. ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, 15 ಕಾರ್ಮಿಕರ ಮೃತದೇಹ ಪತ್ತೆಯಾಗಿದೆ. ಉಳಿದವರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News