ದೆಹಲಿ ಮೆಟ್ರೊದಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ

Update: 2021-08-29 17:55 GMT

ಹೊಸದಿಲ್ಲಿ, ಅ. 29: ದಿಲ್ಲಿ ಮೆಟ್ರೊ ರೈಲು ನಿಲ್ದಾಣದಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯದ ಸೌಲಭ್ಯ ಒದಗಿಸಲಾಗಿದೆ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ತೃತೀಯ ಲಿಂಗಿಗಳಿಗೆ ಸುರಕ್ಷಿತ ಸ್ಥಳ ಒದಗಿಸುವ ಹಾಗೂ ಲಿಂಗ ತಾರತಮ್ಯವನ್ನು ನಿವಾರಿಸುವ ಹಿನ್ನೆಲೆಯಲ್ಲಿ ಅವರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಗ ವಿಕಲರಿಗೆ ಮಾತ್ರವೇ ನಿಗದಿಗೊಳಿಸಲಾಗಿದ್ದ ಶೌಚಾಲಯವನ್ನು ತೃತೀಯ ಲಿಂಗಿಗಳಿಗೆ ಕೂಡ ಬಳಕೆಗೆ ಮುಕ್ತವಾಗಿಸಲಾಗಿದೆ ಎಂದು ದಿಲ್ಲಿ ಮೆಟ್ರೊದ ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್ಲಿ ಮೆಟ್ರೋ ರೈಲು ನಿಲ್ದಾಣದಲ್ಲಿ ಪ್ರಸ್ತುತ ಇಂತಹ 347 ಪ್ರತ್ಯೇಕ ಶೌಚಾಲಯಗಳಿವೆ (ಇತರ ಪ್ರಯಾಣಿಕರಿಗೆ ಇರುವ ಶೌಚಾಲಯ ಹೊರತುಪಡಿಸಿ) ಎಂದು ಅವರು ತಿಳಿಸಿದ್ದಾರೆ.
 ತೃತೀಯ ಲಿಂಗಿಗಳಿಗೆ ಹಾಗೂ ಅಲ್ಪಸಂಖ್ಯಾತರಿಗೆ ಸೂಚನೆ ನೀಡುವ ಫಲಕಗಳನ್ನು ಈ ಶೌಚಾಲಯಗಳಲ್ಲಿ ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News