×
Ad

ಬೀದಿ ವ್ಯಾಪಾರಿಗಳ ವಿರುದ್ದ ಕಾರ್ಯಾಚರಣೆ ವೇಳೆ ಅಧಿಕಾರಿಯ ಮೇಲೆ ದಾಳಿ ನಡೆಸಿ ಕೈಬೆರಳು ಕತ್ತರಿಸಿದ ವ್ಯಕ್ತಿ

Update: 2021-08-30 23:41 IST

ಮುಂಬೈ: ಥಾಣೆ ಮಹಾನಗರ ಪಾಲಿಕೆ ಇಂದು ನಡೆಸಿರುವ ಕಾನೂನು ಬಾಹಿರ ಬೀದಿ ವ್ಯಾಪಾರಿಗಳ ವಿರುದ್ಧ ಅಭಿಯಾನವು ತೀವ್ರ ಸ್ವರೂಪ ಪಡೆದುಕೊಂಡಿದೆ. ಮಹಾನಗರ ಪಾಲಿಕೆಯ ಈ ಕ್ರಮದ ಬಗ್ಗೆ ಕೋಪಗೊಂಡ ವ್ಯಕ್ತಿಯೊಬ್ಬನು ಹಿರಿಯ ಅಧಿಕಾರಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಅವರ ಮೂರು ಕೈ ಬೆರಳುಗಳನ್ನು ಕತ್ತರಿಸಿದ್ದಾನೆ.

ಥಾಣೆಯ ಸಹಾಯಕ ಮುನ್ಸಿಪಲ್ ಆಯುಕ್ತೆ ಕಲ್ಪಿತಾ ಪಿಂಪಲ್ ಮೇಲೆ ತರಕಾರಿ ಮಾರಾಟಗಾರ ಅಮರ್ಜಿತ್ ಯಾದವ್  ಚಾಕುವಿನಿಂದ ದಾಳಿ ನಡೆಸಿದ್ದಾನೆ. ಕಲ್ಪಿತಾ ಕಾಸರ್ವದಾವಲಿ ಪ್ರದೇಶದಲ್ಲಿ ಅನಧಿಕೃತ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿದೆ.

ಕಲ್ಪಿತಾ ಪಿಂಪಲ್ ಅವರನ್ನು ಹತ್ತಿರದಲ್ಲಿರುವ ಜುಪಿಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಅಧಿಕಾರಿ ಕೈಗೆ ಬೆರಳನ್ನು ಮರು ಜೋಡಿಸಲು ಪ್ರಯತ್ನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾದ ನಂತರ ಅವರ ಸ್ಥಿತಿ ಸ್ಥಿರವಾಗಿದೆ. ಆರೋಪಿ ಯಾದವ್ ಅವರನ್ನು ಬಂಧಿಸಲಾಗಿದೆ ಹಾಗೂ  ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News