ಮೊಬೈಲ್ ಕುರಿತು ವಾಗ್ವಾದ: ತನ್ನಿಬ್ಬರು ಪುತ್ರಿಯರನ್ನು ಬಾವಿಗೆಸೆದು ಆತ್ಮಹತೈಗೆ ಶರಣಾದ ಮಹಿಳೆ
Update: 2021-08-31 22:02 IST
ಹೊಸದಿಲ್ಲಿ, ಆ. 31: ಮೊಬೈಲ್ ಫೋನ್ ಗೆ ಸಂಬಂಧಿಸಿ ಅತ್ತೆಯೊಂದಿಗೆ ಜಗಳವಾಡಿದ ಮಹಿಳೆಯೋರ್ವರು ತನ್ನ ಇಬ್ಬರು ಪುತ್ರಿಯರನ್ನು ಬಾವಿಗೆ ಎಸೆದು ಬಳಿಕ ತಾನು ಕೂಡ ಆತ್ಮಹತ್ಯೆ ಶರಣಾದ ಘಟನೆ ಮಧ್ಯಪ್ರದೇಶದ ಛಾತರಪುರದ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ 33 ವರ್ಷದ ಮಹಿಳೆ ಹಾಗೂ ಆಕೆಯ 10 ವರ್ಷದ ಪುತ್ರಿ ಸಾವನ್ನಪ್ಪಿದ್ದಾರೆ. ಕಿರಿಯ ಪುತ್ರಿ ಅಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ಘಟನೆಯಲ್ಲಿ ಮಹಿಳೆ ಹಾಗೂ ಆಕೆಯ 10 ವರ್ಷದ ಪುತ್ರಿ ಸಾವನ್ನಪ್ಪಿದ್ದಾರೆ. ನಾಲ್ಕು ವರ್ಷದ ಪುತ್ರಿ ಬಾವಿಯ ಇಟ್ಟಿಗೆ ಎಡೆಯಲ್ಲಿ ಸಿಲುಕಿ ಬದುಕುಳಿದಿದ್ದಾಳೆ. ಮಹಿಳೆ ಮೊಬೈಲ್ ಫೋನ್ ಕುರಿತಂತೆ ಶನಿವಾರ ತನ್ನ ಅತ್ತೆಯೊಂದಿಗೆ ಜಗಳವಾಡಿದ್ದಳು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಆದರೆ, ನಾವು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ’’ ಎಂದು ಛಾತರಪುರ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಒಪಿ) ಶಶಾಂಕ್ ಜೈನ್ ಹೇಳಿದ್ದಾರೆ.